ಹೊಸದಿಗಂತ ವರದಿ,ಹುಬ್ಬಳ್ಳಿ:
ಹಗರಣಗಳಲ್ಲಿ ಭಾಗಿಯಾದವರ ರಾಜೀನಾಮೆ ನೀಡಬೇಕೋ ಅಥವಾ ಬೇಡವೋ ಎನ್ನುವರ ವಿಚಾರಕ್ಕೆ ಇಡೀ ರಾಜ್ಯದಲ್ಲಿ ರಿಯಸಲ್ ಮಾಡಬೇಕಾಗುತ್ತದೆ. ಹಾಗೇನಾದರೂ ಆದರೆ ಹಳೆ ತಲೆಗಳು ಹೋಗಿ ಹೊಸ ತಲೆಗಳು ಬರುತ್ತವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಮುಡಾ ಹಗರಣದಲ್ಲಿ ಯಾರೆಲ್ಲರ ಮೇಲೆ ಪ್ರಕರಣ ದಾಖಲಾಗಿವೆ ಅವರೆಲ್ಲರೂ ರಾಜೀನಾಮೆ ನೀಡಬೇಕು ಎಂಬ ಜೆಡಿಎಸ್ ನಾಯಕ ಜಿ.ಟಿ. ದೇವೆಗೌಡ ಅವರ ಹೇಳಿಕೆಗೆ ಟೆಂಗಿನಕಾಯಿ ಈ ರೀತಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಹಿಂದೆ ವಿಧಾನ ಸಭೆ ಅಧಿವೇಶನದಲ್ಲಿ ಆರೋಪ ಇರುವ ಎಲ್ಲರ ವಿರುದ್ಧ ತನಿಖೆ ನಡೆಸಲಿ. ಕರ್ನಾಟಕ ಒಮ್ಮೆ ಸ್ವಚ್ಛವಾಗಿ ಬಿಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ನೈತಿಕತೆ ಹಾಗೂ ಯಡಿಯೂರಪ್ಪ ಅವರ ಮಾನ ಮರ್ಯಾದೆ ಬಗ್ಗೆ ಮಾತನಾಡಿದ್ದರು. ಈಗ ನಿಮಗೆ ನೈತಿಕತೆ ಹಾಗೂ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ತನಿಖೆಯಿಂದ ಸತ್ಯ ಹೊರಬಲಿ. ತಾವುಗಳು ನಿರುಪರಾಯಾದರೆ ಹೈಕಮಾಂಡ ನಿಮ್ಮನ್ನು ಸಿಎಂ ಮಾಡುತ್ತದೆ ಎಂದು ಹೇಳಿದರು.
ಮುಡಾ ಪ್ರಕರಣ ಕುರಿತು ಎಫ್‌ಐಆರ್ ದಾಖಲಾಗಿದ್ದು, ಸಿಎಂ ಸ್ಥಾನದಲ್ಲಿ ಇರುವುದರಿಂದ ಅಕಾರಿಗಳು ತನಿಖೆಯನ್ನು ಪ್ರಾಮಾಣಿಕವಾಗಿ ಮಾಡುವುದಕ್ಕೆ ಆಗಲ್ಲ. ಒಂದು ತಿಂಗಳಲ್ಲಿ ಬಿ ರಿಪೋರ್ಟ್ ಹಾಕಿ ಮುಗಿಸಿ ಬಿಡುತ್ತಾರೆ ಎಂದರು.