Friday, December 12, 2025

Snacks Series 12 | ಈರುಳ್ಳಿ ಬದಲು ಕ್ಯಾರೆಟ್ ಬಜ್ಜಿ ಟ್ರೈ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ

ಸಂಜೆಯ ಚಹಾ ಸಮಯಕ್ಕೆ ಏನಾದರೂ ತಕ್ಷಣ ತಯಾರಾಗುವ, ಆರೋಗ್ಯಕ್ಕೂ ರುಚಿಗೂ ಬೆಸ್ಟ್ ಆಗಿರೋ ಸ್ನ್ಯಾಕ್ ಬೇಕಾ? ಹಾಗಿದ್ರೆ ಕ್ಯಾರೆಟ್ ಬಜ್ಜಿ ಪರ್ಫೆಕ್ಟ್ ಆಯ್ಕೆ. ಕ್ಯಾರೆಟ್‌ನ ಸಿಹಿ ರುಚಿ, ಹಾಗೂ ಮಸಾಲೆಗಳ ಸುವಾಸನೆ ಸೇರಿಕೊಂಡಾಗ ಈ ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು:

ಕ್ಯಾರೆಟ್ – 2 (ಸಣ್ಣಗೆ ತುರಿದದ್ದು)
ಕಡಲೆಹಿಟ್ಟು – 1 ಕಪ್
ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್
ಈರುಳ್ಳಿ – 1
ಹಸಿಮೆಣಸು – 2
ಜೀರಿಗೆ – ½ ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಕರಿಯಲು

ತಯಾರಿಸುವ ವಿಧಾನ:

ಒಂದು ದೊಡ್ಡ ಬಟ್ಟಲಿನಲ್ಲಿ ತುರಿದ ಕ್ಯಾರೆಟ್ ಹಾಕಿ. ಅದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಈರುಳ್ಳಿ, ಹಸಿಮೆಣಸು, ಜೀರಿಗೆ, ಅರಿಶಿನ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ. ಸ್ವಲ್ಪಸ್ವಲ್ಪ ನೀರು ಹಾಕುತ್ತಾ ಮಧ್ಯಮ ಗಟ್ಟಿಯಾದ ಮಿಶ್ರಣ ಮಾಡಿಕೊಳ್ಳಿ.

ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ಕೈಯಿಂದ ಅಥವಾ ಚಮಚದಿಂದ ಮಿಶ್ರಣ ತೆಗೆದು ಎಣ್ಣೆಯಲ್ಲಿ ಹಾಕಿ. ಮಧ್ಯಮ ಉರಿಯಲ್ಲಿ ತಿರುಗಿಸುತ್ತಾ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

error: Content is protected !!