ಕುಂಬಳಕಾಯಿ ಸೂಪ್ ಮಾಡಲು ಬೇಕಾಗುವ ಪದಾರ್ಥ:
ಮೂರು ಕಪ್ ಕತ್ತರಿಸಿದ ಕುಂಬಳಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡು ಆಲೂಗಡ್ಡೆ, ಒಂದು ಚಮಚ ಬೆಣ್ಣೆ, ಸಣ್ಣ ಚಮಚದಲ್ಲಿ ಒಂದು ಚಮಚ ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ. ನಂತರ ಈರುಳ್ಳಿ ಹಾಕಿ ಹುರಿಯಿರಿ.
ಕತ್ತರಿಸಿದ ಆಲೂಗಡ್ಡೆ ಮತ್ತು ಕುಂಬಳಕಾಯಿ ಚೂರುಗಳನ್ನು ಸೇರಿಸಿ. ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಮತ್ತು ಉಪ್ಪನ್ನು ಹಾಕಿ ಮತ್ತು ಎರಡನ್ನು ಚೆನ್ನಾಗಿ ಬೇಯಿಸಿ. ಅದು ಬೆಂದ ನಂತರ, ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಅವುಗಳನ್ನು ಬ್ಲೆಂಡರ್ನಲ್ಲಿ ಹಾಕಿ ಮತ್ತು ಬ್ಲೆಂಡ್ ಮಾಡಿ. ರುಬ್ಬಿದ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ. ಬಿಸಿ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ. ನಂತರ ಬೆಳ್ಳುಳ್ಳಿ ಬ್ರೆಡ್ನೊಂದಿಗೆ ಸೂಪ್ ಅನ್ನು ಬಡಿಸಿ.