ಸಂಜೆ ಸಮಯದಲ್ಲಿ ಚಹಾ ಜೊತೆಗೆ ಬಿಸಿ ಬಿಸಿ ತಿಂಡಿ ತಿನ್ನಲು ಮನಸ್ಸಾಗುತ್ತದೆ. ಅಷ್ಟೇ ಅಲ್ಲದೆ, ಮಕ್ಕಳಿಗೂ ಹೊಸ ಹೊಸ ತಿಂಡಿ ಬೇಕೆನಿಸುತ್ತದೆ. ಅಂತಹ ಸಂದರ್ಭದಲ್ಲಿ ಪನ್ನೀರ್ ಕಟ್ಲೆಟ್ ಒಂದು ರುಚಿಕರವಾದ ಹಾಗೂ ಆರೋಗ್ಯಕರ ಆಯ್ಕೆಯಾಗಿದೆ. ಇದರಲ್ಲಿ ಪನ್ನೀರ್, ತರಕಾರಿಗಳು ಮತ್ತು ಮಸಾಲೆಗಳ ಸುವಾಸನೆಯ ಮಿಶ್ರಣದಿಂದ ಸಿಗುವ ರುಚಿ ಎಲ್ಲರನ್ನು ಮೆಚ್ಚಿಸುತ್ತದೆ.
ಬೇಕಾಗುವ ಪದಾರ್ಥಗಳು:
ಪನ್ನೀರ್ – 1 ಕಪ್ (ತುರಿದು)
ಆಲೂಗಡ್ಡೆ – 2
ಕ್ಯಾರೆಟ್ ತುರಿ – ¼ ಕಪ್
ಬೀನ್ಸ್ – ¼ ಕಪ್
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ (ಸಣ್ಣದಾಗಿ ಕತ್ತರಿಸಿದ)
ಗೋಧಿ ಹಿಟ್ಟು ಅಥವಾ ಮೈದಾ – 2 ಟೇಬಲ್ ಸ್ಪೂನ್
ಬ್ರೆಡ್ crumbs – 1 ಕಪ್
ಮೆಣಸು ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾದಷ್ಟು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಪನ್ನೀರ್, ಆಲೂಗಡ್ಡೆ, ತರಕಾರಿಗಳು, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಧನಿಯಾ ಎಲೆ, ಮೆಣಸು ಪುಡಿ, ಗರಂ ಮಸಾಲಾ, ಉಪ್ಪು ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು, ಚಪ್ಪಟೆ ಮಾಡಿ ಕಟ್ಲೆಟ್ ಆಕಾರ ಕೊಡಿ. ಈಗ ಗೋಧಿ ಹಿಟ್ಟು ಅಥವಾ ಮೈದಾ ಪೇಸ್ಟ್ ತಯಾರಿಸಿ, ಪ್ರತಿಯೊಂದು ಕಟ್ಲೆಟ್ ಅದರಲ್ಲಿ ಮುಳುಗಿಸಿ, ನಂತರ ಬ್ರೆಡ್ crumbs ನಲ್ಲಿ ಅದ್ದಿ.
ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಟ್ಲೆಟ್‌ಗಳನ್ನು ಎರಡೂ ಬದಿಯೂ ಚಿನ್ನದ ಬಣ್ಣ ಬರುವವರೆಗೆ shallow fry ಮಾಡಿದರೆ ಬಿಸಿ ಬಿಸಿ ಪನ್ನೀರ್ ಕಟ್ಲೆಟ್ ರೆಡಿ.