ಬೇಸಿಗೆ ಶುರುವಾಯ್ತು, ಅತಿ ಬಿಸಿಲು ರಾಜ್ಯಕ್ಕೆ ಕಾಲಿಟ್ಟಿದ್ದು ಜನ ಬೇಗನೇ ಡಿಹೈಡ್ರೇಟ್ ಆಗುತ್ತಾರೆ. ನೀರಿನ ಜೊತೆ ಹಣ್ಣುಗಳ ಸೇವನೆ ಕೂಡ ಮುಖ್ಯ. ಯಾವೆಲ್ಲಾ ಹಣ್ಣುಗಳ ಸೇವನೆ ಮುಖ್ಯ ಇಲ್ಲಿದೆ ಡೀಟೇಲ್ಸ್..
ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಹೆಚ್ಚಾಗಿ ತಿನ್ನುವುದು ಒಳ್ಳೆಯ ಮದ್ದು. ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮೊದಲ ಸ್ಥಾನ ಮಾವು. ಮಾವಿನ ಹಣ್ಣು ಬೇಸಿಗೆ ಕಾಲದಲ್ಲಿ ಆರೋಗ್ಯವನ್ನ ಕಾಪಾಡುತ್ತೆ. ಮಾವಿನಲ್ಲೂ ವಿಧ ವಿಧವಾದ ರೀತಿಯಲ್ಲಿ ಇದೆ. ಅಲ್ಫೋನ್ಸಾ, ಇಮಾಮ್‌ಭಾನ್, ಮಲ್ಗೋವಾ ಹೀಗೆ ಮಾವಿನ ಹಣ್ಣಿನಲ್ಲಿ ಅನೇಕ ಬಗೆಗಳಿವೆ.
ಮಾವು ಮಾವಿನ ಹಣ್ಣು ರಕ್ತ ಪರಿಚಲನೆಕಗೆ ಪರಿಣಾಮಕಾರಿಯಾಗಿದೆ. ಈ ಮಾವು ರಕ್ತದೊತ್ತಡವನ್ನ ಕಡಿಮೆ ಮಾಡಿ ಉತ್ತಮ ಹೃದಯವನ್ನ ಕಾಪಾಡುತ್ತೆ. ಜೊತೆಗೆ ಮಾವಿನಲ್ಲಿ ನೀರಿನಂಶ ಕೂಡ ಹೆಚ್ಚಾಗಿದ್ದು, ಅನೇಕ ರೋಗ ಲಕ್ಷಣಗಳಿಗೆ ಮಾವು ಉಪಕಾರಿಯಾಗಲಿದೆ.
ಕಲ್ಲಂಗಡಿ ಹಣ್ಣನ್ನು ನೀರಿನ ಹಣ್ಣು ಅಂತಾನೂ ಕರೆಯುತ್ತಾರೆ. ಹೆಸರೇ ಹೇಳುವಂತೆ ಕಲ್ಲಂಗಡಿಯಲ್ಲಿ ನೀರಿನಂಶ ಜಾಸ್ತಿ. 94% ನೀರಿನಂಶ ಇರೋ ಕಲ್ಲಂಗಡಿ ಬೇಸಿಗೆಯ ಬಿಸಿಲಿಗೆ ತುಂಬಾ ಒಳ್ಳೆಯದು. ಪೊಟ್ಯಾಸಿಯಮ್ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಇದರಲ್ಲಿ ಇದೆ. ಕ್ಯಾಲೋರಿ ಇಲ್ಲದ ಕಾರಣ ಹೃದಯ ಮತ್ತು ಕಣ್ಣಿನ ಆರೋಗ್ಯಕ್ಕೂ ಉತ್ತಮ.
ನೆಲ್ಲಿಕಾಯಿ ಬೇಸಿಗೆಯಲ್ಲಿ ಸಿಗುವ ಇನ್ನೊಂದು ಒಳ್ಳೆಯ ಹಣ್ಣು. ಇದರಲ್ಲಿ ನೀರಿನಂಶ ಜಾಸ್ತಿ ಇದ್ದು ಕಣ್ಣಿಗೂ ಒಳ್ಳೆಯದು. ನೆಲ್ಲಿಕಾಯಿಯಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣಿನ ಆರೋಗ್ಯ ಕಾಪಾಡುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಚರ್ಮದ ಕಾಂತಿ ಹೆಚ್ಚಿಸಿ ದೇಹದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.