ಹೊಸದಿಗಂತ ವರದಿ ರಾಮನಗರ:
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಲಾಗಿದ್ದು, ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದರೆ ಯಾವುದೇ ಪ್ರಯೋಜವಿಲ್ಲ.
ಹಾಗಾಗಿ, ಪಕ್ಷಕ್ಕೆ ಮರಳುವಂತೆ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಯೋಗೇಶ್ವರ್ ಅವರೇ ಕಾಂಗ್ರೆಸ್‌ಗೆ ಬರಬಹುದು ಎಂದರು.
136 ಶಾಸಕರ ಬಲದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರವನ್ನು ಯಾರಿಗಾದರೂ ಬೀಳಿಸಲು ಸಾಧ್ಯವೇ? ನಮ್ಮ ಪಕ್ಷದಿಂದ ಯಾರೂ ಬೇರೆ ಕಡೆಗೆ ಹೋಗುವುದಿಲ್ಲ. ಬದಲಿಗೆ ಬಿಜೆಪಿ-ಜೆಡಿಎಸ್‌ನಿಂದಲೇ ನಮ್ಮ ಕಡೆಗೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 25 ಮಂದಿ ಬರಲು ಸಿದ್ಧರಾಗಿದ್ದು, ಅದರಲ್ಲಿ 12 ಮಂದಿ ಜೆಡಿಎಸ್‌ನವರಿದ್ದಾರೆ ಎಂದು ತಿಳಿಸಿದರು.