ಹೊಸದಿಗಂತ ವರದಿ,ಕುಶಾಲನಗರ:
ಇಲ್ಲಿನ ಹಾರಂಗಿ-ಸುಂದರನಗರ ರಸ್ತೆಯಲ್ಲಿ ಟೂರಿಸ್ಟ್ ಟಿಟಿ ವಾಹನ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿನ ಶ್ರೀರಾಮ್ ಬಡಾವಣೆ ನಿವಾಸಿ ಜಯರಾಮ್ ಅವರ ಪುತ್ರ ಕವಿ (21) ಮೃತ ಯುವಕ.
ಮೃತನ ಜೊತೆಯಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರ ಪೈಕಿ ಒಬ್ಬನ ಸ್ಥಿತಿ ಗಂಭಿರವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಇಬ್ಬರ ಪೈಕಿ ಮಾದಾಪಟ್ಟಣದ ಶರತ್ ಎಂಬರನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೊಬ್ಬ ಚಿಕ್ಕತ್ತೂರು ಗ್ರಾಮದ ಹೇಮಂತ್ ಎಂಬವರಿಗೆ ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ