ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ: ದಂಬೆಕ್ಕಾನ ಸದಾಶಿವ ರೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತುಳು ಭಾಷೆಯ ಕವಿಗೋಷ್ಠಿ, ಸಾಹಿತ್ಯಗೋಷ್ಟಿಗಳು ಹೆಚ್ಚು ಹೆಚ್ಚು ಜರುಗಿ ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ ಎಂದು ಸಾಹಿತಿ, ಕೃಷಿಕ ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ ಆಶಿಸಿದರು.

ತುಳುಕೂಟ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಮತ್ತು ರೇಡಿಯೋ ಪಾಂಚಜನ್ಯ 90.8 ಎಫ್ ಎಂ ಇವುಗಳ ಸಂಯುಕ್ತಾಶ್ರಯದಲ್ಲಿ ಪುತ್ತೂರಿನಲ್ಲಿ ಜರುಗಿದ “ಬರ್ಸದ ಪನಿ – ಕಬಿತೆ ಕೇನಿ” ತುಳು ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಯವರ ಕವಿತೆಯೊಂದನ್ನು ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ಪಾಂಚಜನ್ಯ ರೇಡಿಯೋದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ, ತುಳುಕೂಟದ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ ಎಸ್. ಹಾಗೂ ನ್ಯಾಯವಾದಿ ಹೀರಾ ಉದಯ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಭಂಡಾರಿ ಹೆಬ್ಬಾರೆಬೈಲು, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಮತ್ತು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದು, ನವೀನ್ ಕುಲಾಲ್ ಚಿಪ್ಪಾರ್ ಮತ್ತು ಚಂದ್ರಶೇಖರ ಮಾಲೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.

ಕವಿಗೋಷ್ಠಿ ಕಾರ್ಯಕ್ರಮ

ವೇದಿಕೆ ಕಾರ್ಯಕ್ರಮದ ಬಳಿಕ ಜರುಗಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ಸಂಘಟಕ, ಅಧ್ಯಾಪಕ ರಮೇಶ್ ಉಳಯ ವಹಿಸಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ, ಸಾಹಿತಿ ಹಾಗೂ ಅಧ್ಯಾಪಕಿ ವಿಜಯಾ ಶೆಟ್ಟಿ ಸಾಲೆತ್ತೂರು ಕವಿತೆಗಳ ವಿಮರ್ಶಕರಾಗಿದ್ದರು. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ್ದ 42 ಮಂದಿ ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು.

ತುಳುಕೂಟದ ಜತೆ ಕಾರ್ಯದರ್ಶಿಗಳಾದ ನಯನಾ ರೈ ನೆಲ್ಲಿಕಟ್ಟೆ ಮತ್ತು ಉಲ್ಲಾಸ್ ಪೈ, ನಿರ್ದೇಶಕರಾದ ಮಹಾಬಲ ಗೌಡ, ನರೇಶ್ ಜೈನ್, ಕಲಾವಿದ ಕೃಷ್ಣಪ್ಪ, ಅಬುಬಕ್ಕರ್ ಮುಲಾರ್, ಉಮಾಪ್ರಸಾದ್ ರೈ ನಡುಬೈಲು, ಸದಸ್ಯರಾದ ಅಶ್ರಫ್ ಮುಕ್ವೆ, ಶ್ರೇಯಾಂಸ್ ಜೈನ್, ಮೌನೇಶ್ ವಿಶ್ವಕರ್ಮ, ಕಲಾವಿದ ನಾಗಪ್ಪ ಗೌಡ, ಗಾಯಕ ಚಂದ್ರಶೇಖರ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಸಾಲೆತ್ತೂರು, ಚಿಗುರೆಲೆ ಸಾಹಿತ್ಯ ಬಳಗದ ಅಪೂರ್ವಾ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.

ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರೊ. ಹರಿಪ್ರಸಾದ್ ನೇತೃತ್ವದಲ್ಲಿ ಸಿಂಧೂ, ಕೃತಿಕಾ, ದೀಪ್ತಿ, ಶ್ರಾವ್ಯ ಮತ್ತು ಹರ್ಷಿತಾ ಸ್ವಯಂಸೇವಕರಾಗಿ ಕೈಜೋಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!