ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ; ಶೀಜಾನ್ ಖಾನ್ ಸಂಪರ್ಕದ ನಂತರ ಬದಲಾಗಿದ್ದ ನಟಿ : ಕುಟುಂಬದವರ ಹೇಳಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾದ ಆಕೆಯ ಸಹನಟ ಹಾಗೂ ಮಾಜಿ ಗೆಳೆಯ ಶೀಜಾನ್ ಖಾನ್​ನ ಪೊಲೀಸ್​ ಕಸ್ಟಡಿಯ ಅವಧಿಯನ್ನು ಡಿಸೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಇದರ ನಡುವೆ ತುನಿಶಾರ ಕುಟುಂಬಸ್ಥರು ಹೊಸ ಸಂಗತಿಗಳನ್ನು ಬಹಿರಂಗ ಪಡಿಸಿದ್ದು, ನಟಿ ಹಿಜಾಬ್​ ಸಹ ಧರಿಸುವುದಕ್ಕೂ ಆರಂಭಿಸಿದ್ದರು ಎಂದು ಹತ್ತಿರದ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಡಿ.24ರಂದು ತುನಿಶಾ ಶರ್ಮಾ (20) ಇದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅಲಿಬಾಬಾ – ದಸ್ತಾನ್ – ಎ – ಕಾಬೂಲ್‌ ಎಂಬ ಟಿವಿ ಶೋನ ಸೆಟ್‌ನಲ್ಲಿ ತುನಿಶಾ ಶವವಾಗಿ ಪತ್ತೆಯಾಗಿದ್ದರು. ಸಹನಟನಾದ ಶೀಜಾನ್​ ಖಾನ್​ನೊಂದಿಗೆ ಸ್ನೇಹ ಮತ್ತು ಪ್ರೀತಿ ಹೊಂದಿದ್ದ ತುನಿಶಾ ಆತ್ಮಹತ್ಯೆಗೆ 15 ದಿನಗಳ ಮುನ್ನವಷ್ಟೇ ದೂರವಾಗಿದ್ದರು. ಆತ್ಮಹತ್ಯೆಯ ಮರು ದಿನವೇ ಶೀಜಾನ್ ಖಾನ್​ನನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!