ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಬಂಧನವಾಗಿರುವ ಬಾಯ್ ಫ್ರೆಂಡ್ ಶಿಜಾನ್ ನ ಉದ್ದನೆಯ ತಲೆಗೂದಲಿಗೆ ಕತ್ತರಿ ಹಾಕಲು ಮುಂದಾದ ಜೈಲು ಅಧಿಕಾರಿಗಳಿಗೆ ಕೋರ್ಟ್ ತಡೆ ನಿರ್ದೇಶನ ನೀಡಿದೆ.
ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಜಾನ್ ಸದ್ಯ ಜೈಲಿನಲ್ಲಿ ಇದ್ದಾನೆ. ನಿಯಮದ ಪ್ರಕಾರ ಕತ್ತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದರು. ಆದ್ರೆ ಕೂದಲು ಕತ್ತರಿಸದಂತೆ ಆತನ ಪರ ವಕೀಲರು ಕೋರ್ಟಿಗೆ ಮೊರೆ ಹೋಗಿದ್ದರು. ಶಿಜಾನ್ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರಕ್ಕಾಗಿ ಉದ್ದನೆಯ ಕೂದಲು ಬಿಟ್ಟಿದ್ದರಿಂದ, ಅದನ್ನು ಹಾಗೆಯೇ ಉಳಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ವಕೀಲರು ಕೇಳಿದ್ದರು.
ಈ ಕುರಿತು ಜೈಲಾಧಿಕಾರಿಗಳ ಪ್ರತಿಕ್ರಿಯೆ ಕೇಳಿತ್ತು. ಜೈಲು ಅಧಿಕಾರಿಗಳು ಕೂಡ ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದ್ದು ಜೈಲಿನ ನಿಯಮಗಳ ಪ್ರಕಾರ ಕೇವಲ ಸಿಖ್ ಖೈದಿಗಳಿಗೆ ಮಾತ್ರ ಉದ್ದನೆಯ ಕೂದಲು ಬಿಡಲು ಅವಕಾಶವಿದೆ. ಉಳಿದಂತೆ ಮುಸ್ಲಿಂ ಧರ್ಮದ ಖೈದಿಗಳಿಗೆ ಉದ್ದನೆಯ ಗಡ್ಡ, ಹಿಂದೂ ಧರ್ಮದ ಖೈದಿಗಳಿಗೆ ಸಣ್ಣ ಜುಟ್ಟು ಬಿಡಲು ಅನುಮತಿ ಕೊಡಲಾಗುವುದು. ಹಾಗಾಗಿ ಶಿಜಾನ್ ಅವರ ಉದ್ದ ಕೂದಲಿಗೆ ಕತ್ತರಿ ಹಾಕುವುದು ಅನಿವಾರ್ಯ ಎಂದು ತಿಳಿಸಿತ್ತು.
ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು.
ಆದ್ರೆ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.