ಸುರಂಗ ಕುಸಿತ: ಯಂತ್ರಕ್ಕೆ ಹಾನಿ, ಮತ್ತೆ ಕಾರ್ಯಾಚರಣೆ ವಿಳಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲ್ಕ್ಯಾರಾ ಸುರಂಗದ ಒಳಗೆ ಕೊರೆಯುವ ಅಗರ್ ಯಂತ್ರದ ಬ್ಲೇಡ್‌ಗಳು ಶಿಲಾಖಂಡರಾಶಿಗಳಲ್ಲಿ ಸಿಲುಕಿಹಾಕಿಕೊಂಡಿದ್ದು, ಸುರಂಗದ ಒಳಗಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.

ಅಧಿಕಾರಿಗಳು ರಕ್ಷಣಾ ಕಾರ್ಯಾಕ್ಕೆ ಬದಲಿ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈಗಾಗಲೇ ಸುರಂಗದೊಳಗೆ ಕಾರ್ಮಿಕರು ಸಿಲುಕಿ 14 ದಿನಗಳಾಗಿವೆ. ಕಾರ್ಮಿಕರನ್ನು ತಲುಪಲು ಉಳಿದಿರುವುದು 10-12 ಕಿಮೀ ಮಾತ್ರ. ಇದನ್ನು ಹೇಗೆ ಶ್ರಮಿಸಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಇರುವ ಉಳಿದ ದೂರವನ್ನು ಕೈಯಿಂದಲೇ ಕೊರೆದುಕೊಂಡು ಹೋಗುವುದು ಅಥವಾ ಮೇಲಿನಿಂದ ೮೬ ಮೀಟರ್ ಕೆಳಗೆ ಕೊರೆಯುವುದು ಈಗ ಉಳಿದಿರುವ ಆಯ್ಕೆಯಾಗಿದೆ. ಆದರೆ ಈ ಕಾರ್ಯಾಚರಣೆಗೆ ದೀರ್ಘ ಸಮಯ ಬೇಕಿದೆ.

ಕ್ರಿಸ್‌ಮಸ್ ವೇಳೆಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಅಂದರೆ ಕಾರ್ಮಿಕರ ರಕ್ಷಣೆಗೆ ಇನ್ನೂ ಒಂದು ತಿಂಗಳು ತಗುಲುವ ಸಾಧ್ಯತೆ ಇದೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!