ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ವಾಯುಪಡೆಯ ಯುದ್ಧವಿಮಾನವೊಂದು ಪತನವಾಗಿದ್ದು, ಪೈಲಟ್ ಸಜೀವ ದಹನವಾಗಿದ್ದಾರೆ.
ನಿನ್ನೆ ತಡರಾತ್ರಿ ಅಮೆರಿಕ ನಿರ್ಮಿತವಾದ ಎಫ್-16 ಯುದ್ಧ ವಿಮಾನ ಪತನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ವಿಡಿಯೋಗಳು ವೈರಲ್ ಆಗಿವೆ.
ವಿಮಾನ ಪತನಗೊಂಡ ನಂತರ ಭಾರೀ ಸ್ಫೋಟವಾಗಿದ್ದು, ಪೈಲಟ್ ಮೃತಪಟ್ಟಿದ್ದಾರೆ. ಬಲಿಕೇಸಿರ್ ನಗರದ ಬುರ್ಸಾ-ಇಜ್ಮಿರ್ ಹೆದ್ದಾರಿಯ ಬಳಿ ಪತನವಾಗಿದ್ದು, ತಕ್ಷಣವೇ ಪೊಲೀಸರು ಆಂಬುಲೆನ್ಸ್ ಜತೆ ಸ್ಥಳಕ್ಕೆ ಬಂದಿದ್ದಾರೆ.



