September 18, 2026
Friday, September 18, 2026
spot_img

ಪಲ್ಯ, ಗ್ರೇವಿ & More 18 | ಮನೆಯಲ್ಲಿ ಒಂದೂ ತರಕಾರಿ ಇಲ್ವಾ? ಪರವಾಗಿಲ್ಲ ಬಿಡಿ ಆದ್ರೂ ರುಚಿಯಾದ ಗ್ರೇವಿ ಮಾಡ್ಬೋದು

ಹೇಗೆ ಮಾಡೋದು?

ಮಿಕ್ಸಿ ಜಾರ್‌ಗೆ ಕಾಯಿ, ಈರುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ, ಬೆಳ್ಳುಳ್ಳಿ, ಗಸಗಸೆ, ಗೋಡಂಬಿ, ಕಾಳುಮೆಣಸು, ಜೀರಿಗೆ, ಸೋಂಪು, ಜಾಯಿಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಹಾಗೂ ಒಂದೆರಡು ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ

ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಉದ್ದಕೆ ಹೆಚ್ಚಿದ ಈರುಳ್ಳಿ ಹಾಕಿ, ನಂತರ ಪಲಾವ್‌ ಎಲೆ, ಸ್ಟಾರ್‌ ಮೊಗ್ಗು ಹಾಕಿ ಮಿಕ್ಸ್‌ ಮಾಡಿ

ಈರುಳ್ಳಿ ಬಾಡಿದ ನಂತರ ಉದ್ದಕೆ ಹೆಚ್ಚಿದ ಟೊಮ್ಯಾಟೊ ಹಾಕಿ, ನಂತರ ಅರಿಶಿಣ, ಕೊತ್ತಂಬರಿ ಕಾಳು ಪುಡಿ, ಖಾರದಪುಡಿ, ಗರಂ ಮಸಾಲ ಹಾಕಿ ಮಿಕ್ಸ್‌ ಮಾಡಿ.

ಇದು ಎಣ್ಣೆ ಬಿಟ್ಟ ನಂತರ ಮಿಕ್ಸಿಯ ಮಸಾಲಾ ಹಾಕಿ, ನೀರು ಹಾಕಿ. ಎಣ್ಣೆ ಬಿಟ್ಟ ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ಗ್ರೇವಿ ರೆಡಿ

ನೀವಿದನ್ನು ಅನ್ನ, ಚಪಾತಿ, ಪರೋಟ, ಪೂರಿ, ರೊಟ್ಟಿ, ಘೀರೈಸ್‌ ಜೊತೆಗೂ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !