ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಮದುವೆ ಮನೆಯಲ್ಲಿ ನಡೆಯಬಾರದ ಅನಾಹುತ ನಡೆದಿದೆ.
ಮದುವೆಗೆಂದ ಬಂದ ಜನರು, ವಧು-ವರರ ಮೇಲೆ ದುಷ್ಕರ್ಮಿಗಳು ಆಸಿಡ್ ಹಾಕಿ ಓಡಿಹೋಗಿದ್ದಾರೆ.
ಮಕ್ಕಳೂ ಸೇರಿ ೧೨ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ತರ್ ಜಿಲ್ಲೆಯ ದಮ್ರು ಬಾಘೇಲ್ ಹಾಗೂ ಸುನೀತಾ ಕಶ್ಯಪ್ ವಿವಾಹ ನಡೆಯುತ್ತಿದ್ದು, ಇದ್ದಕ್ಕಿದ್ದಂತೆಯೇ ಕರೆಂಟ್ ಹೋಗಿದೆ.
ಅಪರಿಚಿತನೊಬ್ಬ ಸ್ಟೇಜ್ ಏರಿ ವಧುವರರ ಮೇಲೆ ದಾಳಿ ಮಾಡಿದ್ದಾನೆ. ಪಕ್ಕದಲ್ಲೇ ಇದ್ದ ಮಕ್ಕಳು ಹಾಗೂ ಇತರರ ಮೇಲೂ ಆಸಿಡ್ ಹಾಕಿ ಓಡಿಹೋಗಿದ್ದಾರೆ. ಇವರು ಯಾರು? ಯಾಕಾಗಿ ಹೀಗೆ ಮಾಡಿದ್ದಾರೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.