ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವೀಟರ್ ನ್ನು ಖರೀದಿಸಿರುವ ಎಲಾನ್ ಮಸ್ಕ್ “ಟ್ವಿಟರ್ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುತ್ತೇನೆ” ಎಂದಿದ್ದರು. ಅವರ ಈ ಮಾತು ಟ್ವೀಟರ್ ನಿಂದ ಹಣಗಳಿಸುವುದಾಗಿರ ಬಹುದಾ? ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರಲ್ಲಿ ಮೂಡಿದೆ. ಏಕೆಂದರೆ ಟ್ವೀಟರ್ ಮುಂದೆ ಶುಲ್ಕಸಹಿತವಾಗುವ ಸುಳಿವನ್ನು ಮಸ್ಕ್ ನೀಡಿದ್ದಾರೆ.
ಅವರ ಇತ್ತೀಚಿನ ಟ್ವೀಟ್ ವೊಂದರಲ್ಲಿ ಮಸ್ಕ್ “ಸಾಧಾರಣ ಬಳಕೆದಾರರಿಗೆ ಟ್ವೀಟರ್ ಉಚಿತವಾಗಿದ್ದು, ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಅಲ್ಪಪ್ರಮಾಣದಲ್ಲಿ ಶುಲ್ಕವಾಗಬಹುದು” ಎಂದು ಹೇಳಿದ್ದಾರೆ. ಅವರ ಈ ಟ್ವೀಟ್ ಮುಂದಿನ ದಿನಗಳಲ್ಲಿ ಎಲ್ಲಾ ಕಮರ್ಷಿಯಲ್ ಮತ್ತೆ ಸರ್ಕಾರಿ ನೌಕರರಿಗೆ ಟ್ವೀಟರ್ ಶುಲ್ಕ ವಿಧಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುವಂತಿದೆ. ಇದು ಕೇವಲ ವಾಣಿಜ್ಯ ಬಳಕೆದಾರರು ಮತ್ತು ಸರ್ಕಾರಿ ಬಳಕೆದಾರರಿಗೆ ಮಾತ್ರವಾಗಿದ್ದು ಸಾಮಾನ್ಯ ಬಳಕೆದಾರರಿಗೆ ಇದು ಉಚಿತವಾಗೇ ಇರಲಿದೆ ಎಂದು ಮಸ್ಕ್ ಹೇಳಿದ್ದಾರೆ.
ಇದರೊಂದಿಗೆ ಮುಂದಿನ ದಿನಗಳಲ್ಲಿ ಟ್ವೀಟರ್ ನ ಬಹುತೇಕ ಎಲ್ಲಾ ವ್ಯವಸ್ಥೆಗಳು ಶುಲ್ಕಸಹಿತವಾಗಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ. ಈಗಾಗಲೆ ಕೆಲವು ಪೇಡ್ ಸರ್ವೀಸ್ ಗಳನ್ನು ಟ್ವೀಟರ್ ಕೊಡುತ್ತಿದ್ದು ಇದು ಇನ್ನೂ ವಿಸ್ತಾರಗೊಳ್ಳಬಹುದು ಎಂದು ಊಹಿಸಲಾಗಿದೆ. ಕೆಲವು ವದಂತಿಗಳ ಪ್ರಕಾರ ಟ್ವೀಟ್ ಎಂಬೆಡ್ ಮಾಡುವುದೂ ಕೂಡ ಶುಲ್ಕ ಸಹಿತವಾಗಬಹುದು ಎನ್ನಲಾಗಿದೆ.
Twitter will always be free for casual users, but maybe a slight cost for commercial/government users
— Elon Musk (@elonmusk) May 3, 2022