ಹೊಸದಿಗಂತ ವರದಿ, ಶಿರಸಿ:
ಇಲ್ಲಿಯ ಪ್ರಸಿದ್ದ ವೈದ್ಯ ದಂಪತಿಯ ಅವಳಿ ಮಕ್ಕಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶಿರಸಿಯ ವೈದ್ಯ ದಂಪತಿ ಡಾ. ದಿನೇಶ ಹೆಗಡೆ ಮತ್ತು ಡಾ. ಸುಮನ್ ಹೆಗಡೆ ಪುತ್ರ ದಕ್ಷ ಹಾಗೂ ಪುತ್ರಿ ರಕ್ಷಾ 600 ಕ್ಕೆ 594 ಅಂಕ ಗಳಿಸಿ ಶೇ. 99 ರಷ್ಟು ಸಾಧನೆ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದಕ್ಷ 4 ವಿಷಯದಲ್ಲಿ .100 ಅಂಕ ಮತ್ತು ರಕ್ಷಾ 2 ವಿಷಯದಲ್ಲಿ 100 ಅಂಕ ಪಡೆದಿದ್ದಾರೆ. ರಕ್ಷಾ ಕಳೆದ ಜೆಇಇ ಮೆನ್ಸ್ ಬಿಆರ್ ಕ್ ನಲ್ಲಿ ದೇಶಕ್ಕೆ 5ನೇ ರ್ಯಾಂಕ್ ಪಡೆದಿದ್ದು ಉಲ್ಲೇಖನೀಯ.
ಪ್ರತಿಭಾವಂತ ಅವಳಿಗಳಾದ ಇವರು ಎಸ್ಸೆಸ್ಸೆಲ್ಸಿಯಲ್ಲೂ ರಾಜ್ಯಮಟ್ಟದ ಸಾಧನೆ ಮಾಡಿದ್ದು ದಕ್ಷ ರಾಜ್ಯಕ್ಕೆ 7 ನೇ ರ್ಯಾಂಕ್ ಮತ್ತು ರಕ್ಷಾ 9 ನೇ ರ್ಯಾಂಕ್ ಪಡೆದಿದ್ದರು