January16, 2026
Friday, January 16, 2026
spot_img

ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಕೇಸ್ ಗೆ ಟ್ವಿಸ್ಟ್: ಸುಳ್ಳು ಕಥೆ ಕಟ್ಟಿದ ತಂದೆ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ತನಿಖೆ ನಡೆಸಿದ ಪೊಲೀಸರು ಸುಳ್ಳು ಕಥೆ ಕಟ್ಟಿದ ಆರೋಪದಲ್ಲಿ ವಿದ್ಯಾರ್ಥಿನಿಯ ತಂದೆಯನ್ನೇ ಬಂಧಿಸಿದ್ದಾರೆ.

ನಕಲಿ ಆ್ಯಸಿಡ್ ದಾಳಿಯ ಸೂತ್ರಧಾರ ಅಕೀದ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 20 ವರ್ಷದ ಮಗಳ ಕೈಗಳ ಮೇಲೆ ತಾನೇ ಟಾಯ್ಲೆಟ್ ಕ್ಲೀನರ್ ಸುರಿದು ಸುಳ್ಳು ಕಥೆ ಕಟ್ಟಿರುವುದಾಗಿ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ದೆಹಲಿಯ ಲಕ್ಷ್ಮಿಬಾಯಿ ಕಾಲೇಜಿನ ಹೊರಗೆ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಬೈಕ್‌ನಲ್ಲಿ ಬಂದ ಮೂವರು ಆ್ಯಸಿಡ್ ಎಸೆದು ಪರಾರಿಯಾಗಿದ್ದಾರೆ. ಮುಖವನ್ನು ರಕ್ಷಿಸುವ ಭರದಲ್ಲಿ ತನ್ನ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆರೋಪಿಗಳಲ್ಲಿ ಓರ್ವ ಮುಕುಂದ್‌ಪುರದ ನಿವಾಸಿ ಜಿತೇಂದ್ರ ಮತ್ತು ಆತನ ಮತ್ತಿಬ್ಬರು ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಎಂದು ಆರೋಪಿಸಿದ್ದಳು.

ಆದ್ರೆ ವಿದ್ಯಾರ್ಥಿನಿಯ ಹೇಳಿಕೆಯಲ್ಲಿ ಗೊಂದಲವಿರುವುದನ್ನು ಪೊಲೀಸರು ಗಮನಿಸಿದ್ದು, ಕೂಡಲೇ ಆರೋಪಿ ಜಿತೇಂದ್ರ ಹಾಗೂ ಆತನ ಬೈಕ್ ಕೃತ್ಯ ನಡೆದಿದೆ ಎಂದು ಹೇಳಿದ ಸಮಯದಲ್ಲಿ ಬೇರೆ ಕಡೆ ಇರುವುದು ಕಂಡು ಬಂದಿತ್ತು. ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳಿಂದ ಇದು ದೃಢಪಟ್ಟಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದರ್ ಯಾದವ್ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ವೇಳೆ ಘಟನೆಯ 2 ದಿನದ ಹಿಂದೆ ವಿದ್ಯಾರ್ಥಿನಿಯ ತಂದೆಯ ಮೇಲೆ ಜಿತೇಂದ್ರ ಪತ್ನಿ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ದೂರು ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆಯೂ ವಾಗ್ವಾದ ನಡೆದಿತ್ತು. ಇದೇ ಕಾರಣಕ್ಕಾಗಿ ವಿದ್ಯಾರ್ಥಿನಿಯ ತಂದೆಯು ಜಿತೇಂದ್ರ ವಿರುದ್ಧ ಸಂಚು ರೂಪಿಸಿ, ಆ್ಯಸಿಡ್ ದಾಳಿಯ ಸುಳ್ಳು ಕಥೆ ಕಟ್ಟಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.

Must Read

error: Content is protected !!