ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ವಿದ್ಯಾರ್ಥಿನಿ ಮೇಲಿನ ಅತ್ಯಾಚಾರವನ್ನು ಆಕೆಯ ತಂದೆ ಅಲ್ಲಗಳೆದಿದ್ದಾರೆ.
ಅಂತಹದ್ದೇನೂ ನಡೆದಿಲ್ಲ.. ತಮ್ಮ ಮಗಳು ಪ್ರಜ್ಞೆ ತಪ್ಪಿ ಆಟೋದಿಂದ ಬಿದ್ದಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ‘ಶುಕ್ರವಾರ ರಾತ್ರಿ 9:34ಕ್ಕೆ ನನಗೆ ಕರೆ ಮಾಡಿ ತಮ್ಮ ಮಗಳು ಆಟೋದಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆಕೆಯನ್ನು ಎಸ್ಎಸ್ಕೆಎಂ ಆಸ್ಪತ್ರೆಯ ನರವಿಜ್ಞಾನ ವಿಭಾಗಕ್ಕೆ ದಾಖಲಿಸಲಾಗಿತ್ತು. ಆಕೆಯನ್ನು ಪೊಲೀಸರು ರಕ್ಷಿಸಿ, ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ನಾನು ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಈ ವೇಳೆ ಆಕೆ ತನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಗಳು ಹೇಳಿದ್ದಾಳೆ. ಅಂತೆಯೇ ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯಾರೋ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೀಗಾಗಿ ನನ್ನ ಮಗಳ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಪೊಲೀಸರು ಏನಾದರೂ ಹೇಳುವಂತೆ ಆಕೆಗೆ ಒತ್ತಾಯ ಮಾಡಿದರು. ಆದರೆ ನನ್ನ ಮಗಳು ಯಾವುದೇ ರೀತಿಯ ಹೇಳಿಕೆ ನೀಡಲಿಲ್ಲ ಎಂದು ಹೇಳಿದ್ದಾಳೆ ಎಂದರು.
ನಾನು ಮಗಳೊಂದಿಗೆ ಮಾತನಾಡಿದ್ದೇನೆ. ಯಾರೂ ಅವಳನ್ನು ಹಿಂಸಿಸಿಲ್ಲ ಅಥವಾ ಅವಳೊಂದಿಗೆ ಅನುಚಿತವಾಗಿ ವರ್ತಿಸಿಲ್ಲ ಎಂದು ಅವಳು ಹೇಳಿದಳು. ನಾನು ನನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳು ಸಾಮಾನ್ಯಳಾಗಿದ್ದಾಳೆ. ಬಂಧಿಸಲ್ಪಟ್ಟ ವ್ಯಕ್ತಿಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ನಾನು ಅವಳೊಂದಿಗೆ ಹೆಚ್ಚು ಸಮಯ ಮಾತನಾಡಲು ಸಾಧ್ಯವಾಗಲಿಲ್ಲ. ಅವಳು ನಿದ್ರಿಸುತ್ತಿದ್ದಾಳೆ. ಅವಳು ಎಚ್ಚರವಾದ ನಂತರ ನಾನು ಅವಳೊಂದಿಗೆ ಮಾತನಾಡುತ್ತೇನೆ ಎಂದರು.