ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೊಸೆಯೊಬ್ಬಳು ನನ್ನ ಅತ್ತೆಗೆ ತುಂಬಾ ವಯಸ್ಸಾಗಿದೆ ಆದರೂ ನನಗೆ ಹಿಂಸೆ ಕೊಡುತ್ತಾರೆ ಅವರನ್ನು ಸಾಯಿಸಬೇಕು. ಹಾಗಾಗಿ ಯಾವುದಾದರೂ ಮಾತ್ರೆ ಇದ್ದರೆ ಕೊಡಿ ಎಂದು ವೈದ್ಯರಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದರು. ಭಯದಿಂದ ತಕ್ಷಣ ಮೆಸೇಜ್ ಡಿಲೀಟ್ ಮಾಡಿ ನಂಬರ್ ಬ್ಲಾಕ್ ಮಾಡಿದ್ದರು. ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಆನ್‌ಲೈನ್‌ನಲ್ಲಿ ವೈದ್ಯರ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಿದ್ದ ಸೊಸೆ ಮಾತ್ರೆ ಕೊಡುವಂತೆ ಕೇಳಿದ್ದಳು. ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಠಾಣೆಗೆ ಕರೆಸಿದಾಗ ಸತ್ಯ ಗೊತ್ತಾಗಿದೆ.
ಈ ಹಿಂದೆ ಈ ಯುವತಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಒಮ್ಮೆ ಮನೆಯನ್ನೇ ಬಿಟ್ಟು ಹೋಗಿದ್ದಳಂತೆ.ಈಗಲೂ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಗೂಗಲ್‌ನಲ್ಲಿ ವೈದ್ಯರ ನಂಬರ್ ಹುಡುಕಿದ್ದ ಮಹಿಳೆಗೆ ಡಾ.ಸುನಿಲ್ ಎಂಬುವವರ ನಂಬರ್ ಸಿಕ್ಕಿದೆ. ತಕ್ಷಣ ಆವರಿಗೆ ಮೆಸೇಜ್ ಮಾಡಿದ್ದಾಳೆ. ಈ ವಿಷಯ ತಿಳಿದ ವೈದ್ಯರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.