ಟ್ವಿಟರ್, ಅಮೆಜಾನ್ ಆಯಿತು ಈಗ OYO ಸರದಿ: ಕಂಪನಿಯಿಂದ 600 ಉದ್ಯೋಗಿಗಳಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟ್ವಿಟರ್, ಅಮೆಜಾನ್, ಪೇಸ್ ಬುಕ್ ಬಳಿಕ ಇದೀಗ ಈಗ ಓಯೊ (OYO) ಕಂಪೆನಿ ತಮ್ಮ ಉದ್ಯೋಗಿ ವಜಾ ಪ್ರಕ್ರಿಯೆ ಮುಂದುವರಿಸಿದ್ದು, ಅನೇಕರಿಗೆ ಗೇಟ್ ಪಾಶ್ ನೀಡಿದೆ.

ಈ ಕುರಿತು ಓಯೋ ಕಂಪನಿಯು ಶನಿವಾರ ಹೇಳಿಕೆಯನ್ನ ನೀಡಿದ್ದು, ನಮ್ಮ ಒಟ್ಟು 3,700 ಉದ್ಯೋಗಿಗಳಲ್ಲಿ ಅನೇಕರನ್ನ ನಾವು ವಜಾಗೊಳಿಸುತ್ತೇವೆ ಎಂದಿದೆ. ಅದ್ರಂತೆ, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದಲ್ಲಿ 600 ಉದ್ಯೋಗಗಳು ಕಡಿಮೆಯಾಗಲಿವೆ ಎಂದು ತಿಳಿಸಿದೆ. Oyo ತನ್ನ 3700 ಉದ್ಯೋಗಿಗಳ ಪೈಕಿ 10 ಪ್ರತಿಶತದಷ್ಟು ಉದ್ಯೋಗಿಗಳನ್ನ ಕಡಿಮೆ ಮಾಡುತ್ತದೆ.

ಸುಗಮ ಕಾರ್ಯನಿರ್ವಹಣೆಗಾಗಿ ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನ ವಿಲೀನಗೊಳಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. IPO ಗಾಗಿ ಸಜ್ಜಾಗುತ್ತಿರುವ ಟ್ರಾವೆಲ್ ತಂತ್ರಜ್ಞಾನ ಸಂಸ್ಥೆ OYO, ತನ್ನ ಸಂಬಂಧ ನಿರ್ವಹಣಾ ತಂಡಕ್ಕೆ ಸುಮಾರು 250 ಜನರನ್ನ ನೇಮಿಸಿಕೊಳ್ಳುವುದಾಗಿ ಹೇಳಿದೆ.

OYO ಹೋಟೆಲ್ಸ್ ಮತ್ತು ಹೋಮ್ಸ್ ಎಂದೂ ಕರೆಯಲ್ಪಡುವ ಕಂಪನಿಯನ್ನ 2012ರಲ್ಲಿ ರಿತೇಶ್ ಅಗರ್ವಾಲ್ ಸ್ಥಾಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!