ಹೊಸದಿಗಂತ ಡಿಜಿಟಲ್ ಡೆಸ್ಕ್
ಟ್ವಿಟರ್ ಸಂಸ್ಥೆಯನ್ನು ಖರೀದಿಗೆ ಒಪ್ಪಂದ ಮಾಡಿಕೊಂಡು, ಆ ಬಳಿಕ ಒಪ್ಪಂದ ಮುಂದುವರೆಸಲು ಹಿಂದೇಟು ಹಾಕಿ ಟ್ವಿಟರ್‌ನೊಂದಿಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಸಂಸ್ಥೆಯನ್ನು ಹಣಿಯಲ್ಲಿ ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆ ಸಂಸ್ಥೆ ʼಭಾರತದಲ್ಲಿ ಸ್ಥಳೀಯ ಕಾನೂನುಗಳನ್ನು ಪಾಲಿಸದ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದಾರೆ.
“2021 ರಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚಿಸಿದ್ದ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ.ʼ ʼಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ಭಾರತ ಸರ್ಕಾರ ಹೊರಡಿಸಿದ ಕೆಲವು ನಿರ್ಬಂಧಗಳನ್ನು ಸಹ ಟ್ವಿಟರ್ ಪಾಲಿಸಿಲ್ಲ ಎಂದಿರುವ ಮಾಸ್ಕ್, ಟ್ವಿಟರ್ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತಾಗಿಯೂ ಉಲ್ಲೇಖಿಸಿ, ಭಾರತದಲ್ಲಿ ಸ್ಥಳೀಯ ಕಾನೂನನ್ನು ಟ್ವಿಟರ್ ಗೌರವಿಸಿಲ್ಲ. ಟ್ವಿಟರ್ ಎಲ್ಲಾ ಮಾಹಿತಿಗಳನ್ನು ನಮಗೆ ನೀಡಲು ವಿಫಲವಾಗಿದ್ದರಿಂದಲೇ ಖರೀದಿ ಒಪ್ಪಂದದಿಂದ ಹಿಂದೆ ಸರಿಯಬೇಕಾಯಿತು ಎಂದಿದ್ದಾರೆ.
ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಟ್ವಿಟರ್ ಸಂಸ್ಥೆ, ಭಾರತ ಸರ್ಕಾರದ ಕೆಲವು ನಿಯಮಾವಳಿಗಳನ್ನು ನಾವು ಅಲ್ಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ನಮ್ಮ ನಡೆ ಕಾನೂನುಬಾಹಿರವೆಂದು ಭಾರತ ಸರ್ಕಾರ ಪರಿಗಣಿಸುವುದಾದರೆ ನಾವು ಅಲ್ಲಿನ ವ್ಯವಹಾರವನ್ನು ಮುಚ್ಚಲಿದ್ದೇವೆ ಎಂಬ ವಿಚಾರವನ್ನು ಹೈಕೋರ್ಟ್ ಗೆ ತಿಳಿಸಿದ್ದೇವೆ. ಈ ಅರ್ಜಿ ಇನ್ನು ವಿಚಾರಣೆ ಹಂತದಲ್ಲಿದ್ದು, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಲಾಗಿದೆ ಎಂದು ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ