March 23, 2026
Monday, March 23, 2026
spot_img

ಕೇರಳ ರಾಜ್ಯಕ್ಕೆ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಹೊಸದಿಗಂತ ವರದಿ ​ಮಡಿಕೇರಿ:

ಅಕ್ರಮವಾಗಿ ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಣಗೋಡು ಹಿಟ್ಟೂರು ನಿವಾಸಿ ಮಧು ಮಾದೇವ (53) ಮತ್ತು ಕೊಳವಿಗೆ ಗ್ರಾಮದ ನಿವಾಸಿ ಶಶಿಕುಮಾರ್ (24) ಬಂಧಿತ ಆರೋಪಿಗಳು.

ಬಂಧಿತ ಆರೋಪಿ ಮಧು ಮಾದೇವ ತಾನು ಹೊಂದಿರುವ ಮಾರುತಿ KL-04W-6288ರ ಕಾರಿನಲ್ಲಿ ಗೋಣಿಕೊಪ್ಪ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ. ಶಶಿಕುಮಾ‌ರ್ ಎಂಬಾತನನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದ.

ಇದನ್ನೂ ಓದಿ:

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೆರುಂಬಾಡಿ ಗೇಟ್ ಬಳಿ-ಕಾರನ್ನು ತಪಾಸಣೆ ಮಾಡುವ ವೇಳೆ ವಾಹನದಲ್ಲಿ ಸುಮಾರು 250 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಮಧು ಮತ್ತು ಶಶಿಕುಮಾರ್‌ನನ್ನು ಗಾಂಜಾ ಸಹಿತ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ನಿರ್ದೇಶನದ ಮೇರೆಗೆ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಎಸ್. ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಅನೂಪ್ ಮಾದಪ್ಪ ಪಿ., ಠಾಣಾಧಿಕಾರಿ ಪ್ರಮೋದ್ ಮತ್ತು ಅಪರಾಧ ಪತ್ತೆ ವಿಭಾಗ ಪಿ.ಎಸ್.ಐ. ಕಾವೇರಪ್ಪ ಟಿ.ಎಂ. ಹಾಗೂ ಅಪರಾಧ ಪತ್ತೆ ಕರ್ತವ್ಯ ನಿರತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !