ಹೊಸದಿಗಂತ ವರದಿ ಮಡಿಕೇರಿ:
ಬೈಕ್’ಗಳೆರಡು ಪರಸ್ಪರ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸುಂಟಿಕೊಪ್ಪ ಸಮೀಪದ ಸವೆಂತ್ ಮೈಲ್’ನಲ್ಲಿ ಶನಿವಾರ ನಡೆದಿದೆ.
ಮೃತನನ್ನು ಹುಣಸೂರು ಮೂಲದ ಸಂತೋಷ್ (30) ಎಂದು ಗುರುತಿಸಲಾಗಿದ್ದು, ಮತ್ತೊಂದು ಬೈಕ್’ನ ಸವಾರ ಕೆದಕಲ್ ನಿವಾಸಿ ಚೇತನ್ (35) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.