ಹೊಸದಿಗಂತ ವರದಿ, ವಿಜಯಪುರ:
ಕೃಷಿ ಹೊಂಡದಲ್ಲಿ ಬಿದ್ದ ತಂಗಿನ ಕಾಯಿ ತೆಗೆಯಲು ಹೋಗಿ ಬಾಲಕರಿಬ್ಬರು ಸಾವಿಗೀಡಾದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿ ನಡೆದಿದೆ.
ಪ್ರಮೋದ ಬಿಲೂರ (12), ಸಂತೋಷ ಬಿಲೂರ (10) ಮೃತಪಟ್ಟಿರುವ ಮಕ್ಕಳು.
ಬಾಲಕರು ಕೃಷಿ ಹೊಂಡದಲ್ಲಿ ಬಿದ್ದಿರುವ ತೆಂಗಿನಕಾಯಿ ತೆಗೆಯಲು ಹೋದಾಗ ಈ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿದರು.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.