ಹೊಸದಿಗಂತ ವರದಿ, ವಿಜಯಪುರ:
ಸಿಡಿಲು ಬಡಿದು ಇಬ್ಬರು ಕುರಿಗಾಯಿ ಸೇರಿ 9 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿರಲದಿನ್ನಿ ಬಳಿ ಸೋಮವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಮೂಲತಃ ಚಿಕ್ಕೋಡಿ ಪಟ್ಟಣದ ಜೋಡುಕುರಳಿ ಗ್ರಾಮದ ಬೀರಪ್ಪ ಬಡೆಗೋಳ (20), ಹಾಗೂ ಮಹೇಶ ಬಡೆಗೋಳ (14) ಎಂದು ಗುರುತಿಸಲಾಗಿದೆ.
ಈ ಸಹೋದರರು ಕುರಿ ಮೇಯಿಸುತ್ತಿದ್ದಾಗ, ಗುಡುಗು ಮಿಶ್ರಿತ ಮಳೆ ಬಂದಿದ್ದು, ಸಿಡಿಲು ತಗುಲಿ ಮೃತಪಟ್ಟಿದ್ದಾರೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.