ಕಾಶ್ಮೀರದಲ್ಲಿ ಎರಡು ಜಲವಿದ್ಯುತ್ ಯೋಜನೆಗಳಿಗೆ ಚಾಲನೆ, ಶಾಕ್‌ನಲ್ಲಿ ಪಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸಲಾಲ್ ಮತ್ತು ಬಾಗ್ಲಿಹಾರ್ ಡ್ಯಾಂಗಳಲ್ಲಿ ಜಲಾಶಯ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿಯನ್ನು ಭಾರತ ಆರಂಭಿಸಿದೆ. ಈ ಕಾಮಗಾರಿಯಿಂದ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಸಲಾಲ್ (690 ಮೆಗಾವ್ಯಾಟ್) ಮತ್ತು ಬಾಗ್ಲಿಹಾರ್ (900 ಮೆಗಾವ್ಯಾಟ್) ಜಲವಿದ್ಯುತ್ ಯೋಜನೆಗಳಲ್ಲಿ  ಜಲಾಶಯದಲ್ಲಿ ಶೇಖರವಾದ ಹೂಳು ತೆಗೆದುಹಾಕಲು ʻಫ್ಲಶಿಂಗ್ʼ ಪ್ರಕ್ರಿಯೆಯನ್ನು ಮೇ 1 ರಿಂದ 3 ದಿನಗಳ ಕಾಲ ನಡೆಸಲಾಗಿದೆ.

ಈ ಕಾಮಗಾರಿಯನ್ನು ಭಾರತದ ಅತಿದೊಡ್ಡ ಜಲವಿದ್ಯುತ್ ಕಂಪನಿಯಾದ ರಾಷ್ಟ್ರೀಯ ಜಲವಿದ್ಯುತ್ ನಿಗಮ  ಹಾಗೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಜಂಟಿಯಾಗಿ ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಿಂದ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಿ, ವಿದ್ಯುತ್ ಉತ್ಪಾದನೆಯ ದಕ್ಷತೆಯನ್ನು ಸುಧಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!