September 27, 2026
Sunday, September 27, 2026
spot_img

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ಐಎಸ್ಐ ಶಂಕಿತರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗ್ರೆನೇಡ್ ದಾಳಿ, ಟಾರ್ಗೆಟ್ ಹತ್ಯೆಗಳನ್ನು ನಡೆಸಲು ಸಂಚು ರೂಪಿಸಿದ್ದ ಇಬ್ಬರು ಐಎಸ್ಐ ಶಂಕಿತರನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ರಾಜ್‌ವೀರ್ ಮತ್ತು ವಿವೇಕ್ ಬಂಜಾರ ಎಂದು ಗುರುತಿಸಲಾಗಿದ್ದು, ಪಾಕ್ ಮೂಲದ ಐಎಸ್‌ಐ ವಕ್ತಾರ ಶಹಜಾದ್ ಭಟ್ಟಿ ಸೂಚನೆಯಂತೆ ಭಾರತದಲ್ಲಿ ಸಂಚು ರೂಪಿಸುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಉಪ ಆಯುಕ್ತ(ವಿಶೇಷ ದಳ) ಪ್ರವೀಣ್ ಕುಮಾರ್ ತ್ರಿಪಾಠಿ ಅವರು, ದೆಹಲಿ ಪೊಲೀಸರ ವಿಶೇಷ ತಂಡವು ಇಬ್ಬರು ಐಎಸ್ಐ ಶಂಕಿತರರನ್ನು ಬಂಧಿಸಿದ್ದು, ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸೆಳೆಯುತ್ತಿದ್ದರು. ಬಳಿಕ ದೆಹಲಿ-ಎನ್‌ಸಿಆರ್‌ನಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದರು ಎಂದು ತಿಳಿಸಿದರು.

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸ್ ಇಲಾಖೆ, ಇಬ್ಬರು ಶಂಕಿತರರನ್ನು ಬಂಧಿಸಿದ್ದು, ಈ ಮೂಲಕ ಯೋಜಿತ ದಾಳಿಗಳನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿಸಿದರು.

Must Read