February 10, 2026
Tuesday, February 10, 2026
spot_img

SHOCKING | ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಜಪಾನಿ ಪ್ರವಾಸಿಗರು ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಯ ಚಾಲಕ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಶೋಕ್ ನಗರ ಸ್ಟೇಷನ್ ಹೌಸ್ ಮಾಹಿತಿ ನೀಡಿದೆ.

ಫೆಬ್ರವರಿ 7 ರಂದು ಜಪಾನಿನ ಇಬ್ಬರು ಪುರುಷರು ನವದೆಹಲಿಯಿಂದ ಜೈಪುರಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದರು. ಟ್ಯಾಕ್ಸಿ ಚಾಲಕ ಫೆಬ್ರವರಿ 7 ರ ರಾತ್ರಿ ಈ ಇಬ್ಬರನ್ನೂ ಅಶೋಕ್ ನಗರ ಪ್ರದೇಶದ ರೆಸ್ಟೋರೆಂಟ್‌ಗೆ ಕರೆದೊಯ್ದರು. ಆದರೆ ಅವರು ವಾಪಸ್ ಬರಲಿಲ್ಲ ಎನ್ನಲಾಗಿದೆ.

ಚಾಲಕ ಫೆಬ್ರವರಿ 8 ರ ಬೆಳಗ್ಗೆತನಕ ಅವರಿಗಾಗಿ ಕಾಯುತ್ತಿದ್ದನು. ಆದರೆ ಅವರು ಚಾಲಕನನ್ನು ಸಂಪರ್ಕಿಸಲಿಲ್ಲ ಮತ್ತು ಅವರು ತಾವು ತಂಗಿದ್ದ ಹೋಟೆಲ್ ಅನ್ನು ಸಹ ತಲುಪಿಲ್ಲ. ಹೀಗಾಗಿ ಚಾಲಕ ಸೋಮವಾರ ಪೊಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !