October 11, 2026
Sunday, October 11, 2026
spot_img

SHOCKING | ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳೋಕೆ ಹೋಗಿ ಟೆರೇಸ್‌ನಿಂದ ಬಿದ್ದು ವೃದ್ಧೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋಗಿ ವೃದ್ಧೆಯೊಬ್ಬರು ಟೆರೇಸ್‌ನಿಂದ ಬಿದ್ದು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಪಪ್ಸರಾ ಗ್ರಾಮದ ನಿವಾಸಿ ಮುನ್ನಾ ಎನ್ನುವವರು ತಮ್ಮ ಮನೆಯ ಮಹಡಿಯ ಮೇಲೆ ಕುಳಿತಿದ್ದರು. ಮಧ್ಯಾಹ್ನನದ ವೇಳೆ, ಕಿತ್ತಾಡುತ್ತಿದ್ದ ಮಂಗಗಳ ಗುಂಪೊಂದು ಟೆರೇಸ್‌ ಬಳಿ ಬಂದಿವೆ. ಮಂಗಗಳ ಗುಂಪನ್ನು ನೋಡಿ ವೃದ್ಧೆ ಭಯಪಟ್ಟಿದ್ದಾರೆ.

ತಕ್ಷಣವೇ ಮಂಗಗಳು ವೃದ್ಧೆ ಮೇಲೆ ದಾಳಿ ನಡೆಸಿವೆ. ಮಂಗಗಳಿಂದ ತಪ್ಪಿಸಿಕೊಂಡು ಓಡುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

Must Read