April 11, 2026
Saturday, April 11, 2026
spot_img

ಕೇರಳದಲ್ಲಿ ಹಿಟ್‌ & ರನ್‌ಗೆ ಕರ್ನಾಟಕದ ಇಬ್ಬರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳದಲ್ಲಿ ನಡೆದ ಹಿಟ್‌ & ರನ್‌ ಅಪಘಾತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ.

ಕೇರಳದ ತ್ರಿಕ್ಕಲತ್ತೂರು ಪಲ್ಲಿತಾಳಂ ಬಳಿಯ ಎಂಸಿ ರಸ್ತೆಯಲ್ಲಿ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಮೃತರನ್ನು ಮುತ್ತುರಾಜು (29) ಮತ್ತು ಸರವಣನ್ (24) ಎಂದು ಗುರುತಿಸಲಾಗಿದೆ.

ಪೆಝಕ್ಕಪ್ಪಿಲ್ಲಿ ಪಲ್ಲಿಪ್ಪಾಡಿ ಪ್ರದೇಶದಲ್ಲಿ ಮೃತರು ಜೆಸಿಬಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ತಮ್ಮ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಅಪರಿಚಿತ ವಾಹನದ ಚಾಲಕ ವೇಗವಾಗಿ ಬಂದು ಡಿಕ್ಕಿ ಹೊಡೆದು, ಪರಾರಿಯಾಗಿದ್ದಾನೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಹಾರಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಮಾಡಿದ ವ್ಯಕ್ತಿ ಸ್ವಲ್ಪವೂ ಕನಿಕರ ಇಲ್ಲದಂತೆ ಪರಾರಿಯಾಗಿದ್ದಾನೆ.

ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಅಪರಾಧಿಯನ್ನು ಶೀಘ್ರವೇ ಬಂಧಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !