May 1, 2026
Friday, May 1, 2026
spot_img

ಅಪರೂಪದ ಅನುರಾಗ ನಮ್ಮದು: ಹೈಟು ಲೆಕ್ಕಕ್ಕಿಲ್ಲ, ಧರ್ಮ ಮ್ಯಾಟರ್ ಆಗಲ್ಲ..! ಅಡೆತಡೆ ಮೀರಿ ಒಂದಾದ ಯುವ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿ ಅಂದರೆ ಕೇವಲ ರೂಪ, ಎತ್ತರ ಅಥವಾ ಧರ್ಮ ನೋಡೋದಲ್ಲ… ಮನಸ್ಸು ಮನಸ್ಸಿಗೆ ಸೇರೋದು ಮುಖ್ಯ ಅನ್ನೋದನ್ನು ಆಂಧ್ರಪ್ರದೇಶದ ಈ ಯುವ ಜೋಡಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕುಟುಂಬದ ವಿರೋಧ, ಸಮಾಜದ ಮಾತು, ದೈಹಿಕ ವ್ಯತ್ಯಾಸ ಇವೆಲ್ಲವನ್ನು ಮೀರಿ ಒಂದಾದ ಈ ಜೋಡಿ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜಪೇಟೆಯ ವೇಮುಲಾ ಶಶಿ ಮತ್ತು ಶೇಖ್ ಗೌಸಿಯಾ ಅವರ ಪರಿಚಯ ಶಾಲಾ ದಿನಗಳಿಂದಲೇ ಆರಂಭವಾಗಿತ್ತು. ಒಂಬತ್ತನೇ ತರಗತಿಯಲ್ಲಿ ಸ್ನೇಹಿತರಾಗಿದ್ದ ಇಬ್ಬರ ಬಂಧವು ಕಾಲಕ್ರಮೇಣ ಪ್ರೀತಿಯಾಗಿ ರೂಪಾಂತರಗೊಂಡಿತು. ಪ್ರಸ್ತುತ ಶಶಿ ಜಿಲ್ಲಾ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರಿತ ಉದ್ಯೋಗಿಯಾಗಿದ್ದರೆ, ಗೌಸಿಯಾ ಖಾಸಗಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರ ಪ್ರೀತಿಗೆ ಧರ್ಮದ ಭಿನ್ನತೆ ದೊಡ್ಡ ಸವಾಲಾಗಿತ್ತು. ಶಶಿ ಹಿಂದೂ ಸಮುದಾಯದವರಾಗಿದ್ದು, ಗೌಸಿಯಾ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಜೊತೆಗೆ ಯುವಕನ ಎತ್ತರ ಕಡಿಮೆ ಇರುವುದನ್ನೂ ಯುವತಿಯ ಮನೆಯವರು ವಿರೋಧದ ಕಾರಣವನ್ನಾಗಿ ಮಾಡಿಕೊಂಡಿದ್ದರು.

ಇದನ್ನೂ ಓದಿ:

ಕುಟುಂಬದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಜೋಡಿ ಚರ್ಚ್‌ನಲ್ಲಿ ವಿವಾಹವಾಗಿದ್ದು, ನಂತರ ತಮ್ಮ ಸುರಕ್ಷತೆಗಾಗಿ ಪೊಲೀಸ್ ಠಾಣೆಗೆ ತೆರಳಿದರು. ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಸಮಾಲೋಚನೆ ನಡೆಸಿದರೂ, ಗೌಸಿಯಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

“ನಾನು ನನ್ನ ಪತಿಯೊಂದಿಗೇ ಜೀವನ ನಡೆಸುತ್ತೇನೆ” ಎಂಬ ಅವರ ಸ್ಪಷ್ಟ ನಿಲುವು ಈಗ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯನ್ನು ನೆಟ್ಟಿಗರು “ಇದೇ ನಿಜವಾದ ಪ್ರೀತಿ” ಎಂದು ಹೊಗಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !