ಹೊಸದಿಗಂತ ಮಳವಳ್ಳಿ:
ತಾಲ್ಲೂಕಿನ ಕಿರುಗಾವಲು ಸಮೀಪದ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಗೂಡ್ಸ್ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದ ನಿವಾಸಿಗಳಾದ ಸಾನಿಯಾಮತ್ (24) ಮತ್ತು ಮಹಮದ್ ತೌಸೀಫ್ (25) ಎಂದು ಗುರುತಿಸಲಾಗಿದೆ. ಬನ್ನೂರಿನ ರೈಸ್ ಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಎಂದಿನಂತೆ ಅಕ್ಕಿ ತರಲೆಂದು ಕಿರುಗಾವಲು ಗ್ರಾಮದ ಮಿಲ್‌ಗೆ ಗೂಡ್ಸ್ ಟೆಂಪೋದಲ್ಲಿ ತೆರಳಿದ್ದರು. ಅಕ್ಕಿ ತುಂಬಿಕೊಂಡು ಹಿಂತಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದ ಬನ್ನೂರು ಮತ್ತು ಕಿರುಗಾವಲು ಭಾಗದಲ್ಲಿ ವಿಷಾದದ ಛಾಯೆ ಮೂಡಿದೆ.


