ಹೊಸದಿಗಂತ ವರದಿ,ಹಾವೇರಿ:
ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂಸಭಾವಿ ಗ್ರಾಮದ ಕೊಳ್ಳೇರ ಕಟ್ಟೆಕೆರೆಯಲ್ಲಿ ಕೊಬ್ಬರಿ ಹೋರಿ ಹಬ್ಬವನ್ನು ಮಾ.೪ರಂದು ಆಯೋಜಿಸಲಾಗಿತ್ತು. ಈ ವೇಳೆ ಹೋರಿಯೊಂದು ಸಾರ್ವಜನಿಕರ ಮಧ್ಯೆ ನುಗ್ಗಿದ್ದರಿಂದ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಸಂಬಂದ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯದೇ ಆಯೋಜನೆ ಮಾಡಿದ ಹಿನ್ನೆಲೆಯಲ್ಲಿ ಆಯೋಜಕರಲ್ಲಿ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ನೀಡಿದ್ದು ಇನ್ನುಳಿದವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಹಂಸಭಾವಿಯ ಹನುಮಂತ ರಾಮಪ್ಪ ಈಳಿಗೇರ, ಸೋಮಶೇಖರ ಶಿವಾನಂದಪ್ಪ ಹುಚ್ಚಗೊಂಡರ, ಆಸೀಫ @ ಶಫಿವುಲ್ಲಾ ತಂದೆ ಸೈಯದಅಹ್ಮದ ಮುಲ್ಲಾ ಮತ್ತು ದಿವೀಗಿಹಳ್ಳಿಯ ಶ್ರೀಕಾಂತ ಹನುಮಗೌಡ ನಾಗಪ್ಪನವರ ಬಂಧಿತರು.
ಇವರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.