ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೌಗು ಪ್ರದೇಶಗಳ ಪಟ್ಟಿಗೆ ರಾಜಸ್ಥಾನದ ಫಲೋಡಿಯ ಖಿಛಾನ್ ಹಾಗೂ ಉದಯ್‌ಪುರದ ಮೇನಾರ್ ಪ್ರದೇಶಗಳು ಸೇರ್ಪಡೆಯಾಗಿದ್ದು, ಈ ಮೂಲಕ ಭಾರತದ ಜೌಗು ಸ್ಥಳಗಳ ಸಂಖ್ಯೆ ಈಗ 91ಕ್ಕೆ ಏರಿಕೆಯಾಗಿದೆ.
ಈ ಕುರಿತು ’ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಇದು ಶುಭ ಸುದ್ದಿ. ಪರಿಸರ ಸಂರಕ್ಷಣೆ ಕೆಲಸಗಳು ಅತ್ಯಂತ ವೇಗದಲ್ಲಿ ನಡೆಯುತ್ತಿದ್ದು, ಸಾರ್ವಜನಿಕ ಸಹಭಾಗಿತ್ವದಿಂದ ಸಾಕಾರವಾಗುತ್ತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಹೆಚ್ಚುವರಿಯಾಗಿ ಎರಡು ಸ್ಥಳಗಳ ಸೇರ್ಪಡೆಯಿಂದ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಈ ಸಾಧನೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೈಗೊಂಡಿರುವ ಕ್ರಮಗಳಿಗೆ ಮತ್ತೊಂದು ಪುರಾವೆ. ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಹಸಿರೀಕರಣದ ನಿಟ್ಟಿನಲ್ಲಿ ನೆರವಾಗಲಿದೆ ಎಂದು ಹೇಳಿದ್ದಾರೆ.
ಜೌಗು ಪ್ರದೇಶ ಸಂರಕ್ಷಣೆ ದೃಷ್ಟಿಯಿಂದ 1971ರಲ್ಲಿ ಇರಾನ್‌ನ ರಾಮ್ಸರ್ ನಗರದಲ್ಲಿ ನಡೆದ ಜಾಗತಿಕ ಸಮಾವೇಶದಲ್ಲಿ ಒಪ್ಪಂದ ಏರ್ಪಟ್ಟಿತ್ತು. ಆ ಬಳಿಕ ಸಂರಕ್ಷಿತ ಜೌಗು ಪ್ರದೇಶಗಳನ್ನು ರಾಮ್ಸರ್ ಪಟ್ಟಿ ಎಂದು ಹೆಸರಿಸಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ