ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀನುಗಾರರನ್ನು ಸಮುದ್ರದ ಮಕ್ಕಳು ಎಂದು ಕರೆಯಲಾಗುತ್ತದೆ. ವರ್ಷದ ಪ್ರತಿ ದಿನವೂ ಮೀನು ಹಿಡಿಯಲು ಸಮುದ್ರದ ಆಳಕ್ಕೆ ಧುಮುಕಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದಾಗ್ಯೂ, ಜೂನ್ ಮತ್ತು ಜುಲೈ ಮಾತ್ರ ಮೀನುಗಾರರಿಗೆ ನಷ್ಟದ ತಿಂಗಳುಗಳು. ಜೂನ್ ಮತ್ತು ಜುಲೈನಲ್ಲಿ ಮಳೆಗಾಲವಾದ್ದರಿಂದ ಮೀನುಗಳೂ ಮೊಟ್ಟೆ ಇಟ್ಟು ಮರಿಗಳನ್ನು ಸಾಕುತ್ತವೆ ಎಂಬ ಕಾರಣಕ್ಕೆ ಸರ್ಕಾರ ಮೀನುಗಾರಿಕೆಗೆ ನಿಷೇಧ ಹೇರಿದೆ.
ಈ ಎರಡು ತಿಂಗಳು ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ. ಅದೇ ರೀತಿ, ಕಾರವಾರದ ಬೈತಕೋಲ ಬಂದರಿನಲ್ಲಿ ಮೀನುಗಾರರು ಈ ವರ್ಷದ ತಮ್ಮ ಕಾಯಕವನ್ನ ಇಂದು ನಿಲ್ಲಿಸಿದರು. ನೂರಾರು ಮೀನುಗಾರರು ಬಂದರಿಗೆ ಬೋಟ್ ತಂದು ಲಂಗರು ಹಾಕಿದ್ದು, ನಾಳೆಯಿಂದ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.