ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಹಿಮನದಿಗಳಲ್ಲಿ ಸಿಲುಕಿದ್ದ ಇಬ್ಬರು ಪರ್ವತಾರೋಹಿಗಳನ್ನು ಭಾರತೀಯ ವಾಯುಪಡೆ ರಕ್ಷಿಸಿದೆ. ಗಾಯಗೊಂಡ ಇಬ್ಬರು ಆರೋಹಿಗಳನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ಸಮಯಕ್ಕೆ ಥಾಜಿವಾಸ್ ಗ್ಲೇಸಿಯರ್‌ನಿಂದ ರಕ್ಷಿಸಲಾಯಿತು.
ಕಾಶ್ಮೀರದ ಸೋನಾಮಾರ್ಗ್ ಪ್ರದೇಶದ ಥಾಜಿವಾಸ್ ಗ್ಲೇಸಿಯರ್‌ನಿಂದ ಗಾಯಗೊಂಡ ಇಬ್ಬರು ನಾಗರಿಕರನ್ನು ರಕ್ಷಿಸಲು ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಅನ್ನು ನಿಯೋಜಿಸಿದೆ. ಹಿಮದಲ್ಲಿ ಸಿಲುಕಿ ಗಾಯಗೊಂಡ ಪರ್ವತಾರೋಹಿಗಳನ್ನು ಫೈಸಲ್ ವಾನಿ ಮತ್ತು ಜೀಶನ್ ಮುಷ್ತಾಕ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಆರೋಹಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.