ಹೊಸ ದಿಗಂತ ವರದಿ, ಗೋಕರ್ಣ:
ಹೊಲದ ಬೇಲಿ ಸರಿಪಡಿಸಲು ತೆರಳಿದ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತ ಪಟ್ಟ ಘಟನೆ ಹೀರೆಗುತ್ತಿ ಸಮೀಪದ ಬೆಟ್ಕುಳಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಸತೀಶ ಪಾಂಡುರಂಗ ನಾಯ್ಕ(40) ಮತ್ತು ಉಲ್ಲಾಸ ಗವಡಿ (50) ಮೃತ ದುರ್ದೈವಿಗಳಾಗಿದ್ದು ಎರಡು ದಿನಗಳ ಕಾಲ ಸುರಿದ ಬಾರೀ ಮಳೆಯ ಕಾರಣ ಸಮೀಪದಲ್ಲಿ ಹರಿಯುತ್ತಿರುವ ಅಘನಾಶಿನಿ ನದಿಯ ನೀರು ಕೃಷಿ ಭೂಮಿಯಲ್ಲಿ ತುಂಬಿಕೊಂಡಿದ್ದು ಸಂಜೆ ಸಮಯದಲ್ಲಿ ಕೃಷಿ ಭೂಮಿಗೆ ತೆರಳಿದ ಇವರಲ್ಲಿ ಒಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು ರಕ್ಷಣೆಗೆ ಪ್ರಯತ್ನ ನಡೆಸಿದ ಇನ್ನೋರ್ವ ಸಹ ನೀರುಪಾಲಾಗಿರುವುದಾಗಿ ತಿಳಿದು ಬಂದಿದೆ.
ಇಬ್ಬರ ಮೃತ ದೇಹಗಳು ಹೊಲದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.