ಹೊಸದಿಗಂತ ವರದಿ,ಮದ್ದೂರು :
ವಿದ್ಯುತ್ ಸ್ಪರ್ಶದಿಂದ ಫೋಟೋಗ್ರಾಫರ್‌ಗಳಿಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬೆಸಗರಹಳ್ಳಿಯಲ್ಲಿ ಶನಿವಾರ ಜರುಗಿದೆ.
ಗ್ರಾಮದ ಬಸ್ ನಿಲ್ದಾಣದಲ್ಲಿರುವ ರಶ್ಮಿ ಸ್ಟುಡಿಯೋ ಮಾಲೀಕ ವಿವೇಕಾನಂದ (೪೨) ಹಾಗೂ ಗೆಜ್ಜಲಗೆರೆ ಗ್ರಾಮದ ಮಧುಸೂದನ್ (೩೫) ಎಂಬುವರೇ ಮೃತಪಟ್ಟವರಾಗಿದ್ದಾರೆ.
ಮೂಲತಃ ಕೊಪ್ಪ ಹೋಬಳಿ, ಮರಳಿಗ ಗ್ರಾಮದ ರಾಜೇಗೌಡನ ಪುತ್ರನಾದ ವಿವೇಕಾನಂದ ಬೆಸಗರಹಳ್ಳಿಯಲ್ಲಿ ಶ್ರೀ ಲಕ್ಷ್ಮಿ ಸ್ಟುಡಿಯೋ ನಡೆಸುತ್ತಿದ್ದರು. ಗೆಜ್ಜಲಗೆರೆ ಗ್ರಾಮದ ಸಣ್ಣಪ್ಪನ ಪುತ್ರ ಮಧುಸೂಧನ ಸ್ಟುಡಿಯೋದಲ್ಲಿ ಸಹಾಯಕ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.
ವಿವೇಕಾನಂದ ಹಾಗೂ ಮಧುಸೂಧನ್ ತಮ್ಮ ಸ್ಟುಡಿಯೋ ಕಟ್ಟಡದಲ್ಲಿನ ಮುಭಾಗ ಹೊಸದಾಗಿ ಬೋರ್ಡ್ ಅಳವಡಿಸುತ್ತಿದ್ದರು. ಕಟ್ಟಡದ ಪಕ್ಕದಲ್ಲಿ ಹಾದುಹೋಗಿರುವ ೧೧ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿಗೆ ಬೋರ್ಡ್ ತಗುಲಿದೆ. ಇದರಿಂದ ವಿದ್ಯುತ್ ಸ್ಪರ್ಶ ಉಂಟಾದ ಪರಿಣಾಮ ಮಧುಸೂದನ್ ಹಾಗೂ ವಿವೇಕಾನಂದ ಗಾಯಗೊಂಡು ತೀವ್ರ ಅಸ್ವಸ್ಥರಾದರು.
ತಕ್ಷಣ ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂತಾಪ :
ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ವಿವೇಕಾನಂದ, ಮಧುಸೂಧನ್ ನಿಧನಕ್ಕೆ ಮದ್ದೂರು ತಾಲೂಕು ಛಾಯಾಗ್ರಾಹಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಇಬ್ಬರ ಸಾವಿಗೆ ಸೆಸ್ಕಾಂನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಕಟ್ಟಡದ ಮುಂಭಾಗದ ಹಾದುಹೋಗಿರುವ ತಂತಿಗೆ ಪ್ಲಾಸ್ಟಿಕ್ ಪೈಪ್ ಅಳವಡಿಸದ ಕಾರಣ ಇಂತಹ ಅನಾಹುತ ಸಂಭವಿಸಿದ್ದುಘಿ, ಸೆಸ್ಕಾಂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಛಾಗ್ರಾಹಕರ ಸಂಘ ಒತ್ತಾಯಿಸಿದೆ.