August 31, 2026
Monday, August 31, 2026
spot_img

ಕಳಪೆ ಗುಣಮಟ್ಟದ ಹಿನ್ನೆಲೆ ಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಹಿಂಗ್‌ ಬ್ಯಾನ್‌! FSSAI ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತೀ ಮನೆಯ ಅಡುಗೆ ಮನೆಯಲ್ಲಿ ರಾರಾಜಿಸುವ, ಭಾರತದ ಪ್ರಸಿದ್ಧ ಬ್ರ್ಯಾಂಡ್‌ ಎವರೆಸ್ಟ್‌ ಹಾಗೂ ಎಲ್‌ಜಿಯ ಇಗಿನ ಡಬ್ಬಿಯ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್‌ಜಿ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ಗಳಿಗೆ FSSAI ಶಾಕ್‌ ನೀಡಿದ್ದು, ಕಳಪೆ ಗುಣಮಟ್ಟ ಇರುವ ಹಿಂಗ್‌ಗಳನ್ನು ಯಾರೂ ಬಳಕೆ ಮಾಡಬಾರದು. ತಕ್ಷಣದಿಂದ ಜಾರಿಗೆ ಬರುವಂತೆ ಮಾರಾಟಕ್ಕೂ ನಿಷೇಧ ಹೇರಲಾಗಿದೆ.

ಗ್ರಾಹಕರು ಈ ಎರಡು ಬ್ರ್ಯಾಂಡ್‌ನ ಹಿಂಗಿನ ಗುಣಮಟ್ಟ ಚೆನ್ನಾಗಿಲ್ಲ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಈ ಎರಡೂ ಬ್ರ್ಯಾಂಡ್‌ನ ಹಿಂಗ್‌ನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಯಲ್ಲಿ ಹಿಂಗ್‌ನ ಗುಣಮಟ್ಟ ಕಳಪೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯದ ಎಲ್ಲಾ ಡಿಸ್ಟ್ರಿಬ್ಯೂಟರ್ಸ್‌ ಹಾಗೂ ಮಾರಾಟಗಾರರಿಗೆ ಈ ಉತ್ಪನ್ನಗಳ ಮಾರಾಟವನ್ನಿ ಈ ಕೂಡಲೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ.

ನಿಯಮ ಉಲ್ಲಂಘನೆ FSSAI ಗಮನಕ್ಕೆ ಬಂದ ಹಿನ್ನೆಲೆ ಎರಡೂ ಬ್ರ್ಯಾಂಡ್‌ಗಳ ಇಂಗು ಮಾರಾಟಕ್ಕೆ ನಿರ್ಬಂಧ ಮಾಡಿದ್ದು, FSSAI ಅಧಿಕೃತ ನಿಷೇಧ ಆದೇಶ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ತಲುಪಿಲ್ಲ. FSSAI ಅಧಿಕೃತ ಆದೇಶ ಬಂದ ತಕ್ಷಣ ಎವರೆಸ್ಟ್, LG ಬ್ರ್ಯಾಂಡ್ ಇಂಗು ಮಾರಾಟಕ್ಕೆ ರಾಜ್ಯದಲ್ಲೂ ಸಂಪೂರ್ಣ ಬ್ರೇಕ್ ಬೀಳಲಿದೆ. ಇನ್ನು ಹಿಂಗ್‌ ಬೆನ್ನಲ್ಲೇ ಈ ಬ್ರ್ಯಾಂಡ್‌ಗಳ ಮಸಾಲೆ ಪದಾರ್ಥಗಳನ್ನೂ ಪರೀಕ್ಷೆ ಮಾಡಲು ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಒದಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !