ಎರಡು ರಾಜ್ಯದವರು ಮಾತನಾಡಿ ಸಮಸ್ಯೆ ಪರಿಹರಿಸಿ: ಪ್ರಹ್ಲಾದ್ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ರಾಜ್ಯ ಕಾಂಗ್ರೆಸ್ ಹಾಗೂ ತಮಿಳುನಾಡಿನ ಡಿಎಂಕೆ ಸರ್ಕಾರದ ಸಂಬಂಧ ಬಳಹ ಚೆನ್ನಾಗಿದ್ದು, ಕಾವೇರಿ ನೀರಿನ ವಿಚಾರವಾಗಿ ಪರಸ್ಪರ ಮಾತನಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ತಮಿಳುನಾಡು ಸಿಎಂ ಬೆಂಗಳೂರಿಗೆ ಬಂದಾಗ ಅಪ್ಪಿಕೊಂಡು ಸ್ವಾಗತಿಸಿದ್ದರು. ಡಿಎಂಕೆ ಸಚಿವ ಸನಾತ ಧರ್ಮದ ಬಗ್ಗೆ ಮಾತನಾಡಿದರೂ ಯಾವುದೇ ರೀತಿ ಖಂಡಿಸಿರಲಿಲ್ಲ. ಆದರಿಂದ ಅವರ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳು ಪ್ರಯತ್ನಿಸಲಿ ಎಂದು ವ್ಯಂಗ್ಯವಾಡಿದರು.

ಕಾವೇರಿ ನೀರು ವಿಚಾರವಾಗಿ ಇತ್ತೀಚೆಗೆ ನಡೆದ ಸಂಸದರ ಸಭೆಯಲ್ಲಿ ನಾನು ಹಾಗೂ ಕೇಂದ್ರ ಸಚಿವರು ಎರಡು ರಾಜ್ಯದವರು ಮಾತನಾಡಿಕೊಂಡು ಚರ್ಚಿಸಲು ಸಲಹೆ ನೀಡಿದ್ದೇವೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದು ಅಸಾಧ್ಯ. ಆದರೆ ರಾಜ್ಯಕ್ಕೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರವಾಗಿ ಆರಂಭದಲ್ಲಿ ಎಡವಿದೆ. ನೀರಿ ಸಮಸ್ಯೆ ಬಿಗುಡಾಯಿಸಿದಾಗ ಇದಕ್ಕೆ ಬೇಕಾದ ಯೋಜನೆ ರೂಪಿಸಿ, ವಿರೋಧ ಪಕ್ಷದವರ ಜೊತೆ ಮಾತನಾಡಿ ಪರಿಹರಿಸಿಕೊಳ್ಳಲು ಮುಂದಾಗಲಿಲ್ಲ. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಎರಡುವರೆ ಸಾವಿರ ಕ್ಯೂಸೆಕ್ ನೀರು ಬಿಡಲು ಒಪ್ಪಿಕೊಂಡಿದೆ ಎಂದರು.

ರಾಜ್ಯ ಕಾವೇರಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಕೇಂದ್ರ ಸರ್ಕಾರ ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡುತ್ತಿದೆ. ೫ ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಬಗ್ಗೆ ಅಕಾರಿಗಳ ತಂಡ ಕಳುಹಿಸಿ ಮತ್ತೊಮ್ಮೆ ಪರಿಶೀಲಿಸಲು ರಾಜ್ಯ ಸರ್ಕಾರ ಬೇಡಿಕೆ ಇದೆ. ಈಗಾಗಲೇ ಕೇಂದ್ರ ಜಲ ಸಚಿವ ಜೊತೆಗೆ ಈ ಬಗ್ಗೆ ಮಾತನಾಡಿ ವಿನಂತಿ ಸಹ ಮಾಡಿದ್ದೇನೆ. ಈ ವಿಚಾರಲ್ಲಿ ನಾವು ರಾಜಕೀಯ ಮಾಡಲ್ಲ. ಕರ್ನಾಟಕದ ಹಿತ ಕಾಪಾಡಬೇಕು ಎಂದು ಸ್ಪಷ್ಟಪಡಿಸಿದರು.

ಮಹಾದೇವಪ್ಪನವರು ಮುಂದೊಂದು ಹಿಂದೊಂದು ಮಾತನಾಡುತ್ತಾರೆ. ಕೇಂದ್ರ ಸಂಸದ ಸಹಕಾರ ನೀಡಿರುವ ಬಗ್ಗೆ ಸ್ವತಃ ನಿಮ್ಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಕೇಳಿ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಪ್ರಶ್ನೆ ಬರಲ್ಲ. ರಾಜ್ಯಕ್ಕೆ ಸಹಾಯ ಮಾಡಲು ಎಲ್ಲ ಸಂದರ್ಭದಲ್ಲಿ ನಿಂತಿದ್ದೇವೆ. ಅವರೇ ಘಟಬಂಧನ ಉಳಿಸಿಕೊಳ್ಳಲು ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಚೈತ್ರಾ ಕುಂದಾಪುರ ಪ್ರಕರಣಕ್ಕೆ ಸಂಬಂಸಿ ಪ್ರತಿಕ್ರಿಯಿಸಿ, ವಂಚನೆ ಪ್ರಕರಣವಾಗಿದೆ.ಯಾರದಾದರೂ ಹೆಸರು ಹೇಳಿ ಟೋಪಿ ಹಾಕುತ್ತಾರೆ. ಈ ರೀತಿ ಮಾಡುವವರಿಗೆ ಹಾಗೂ ಪಕ್ಷಕ್ಕೆ ಸೇರಿಸುವುದು ಸರಿಯಲ್ಲ. ಚೈತ್ರಾ ಕುಂದಾಪುರ ಸ್ಟಾರ ಪ್ರಚಾರಕಿಯಾಗಲು ಪಕ್ಷದಲ್ಲಿ ಇರಬೇಕು. ಅವಳು ಯಾರು ಎಂಬುವುದು ನಮಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕಾಂಗ್ರೆಸ್ ಬಹಳ ಮಾತನಾಡುತ್ತಿದ್ದಾರೆ. ಆದರೆ ಈ ಹಿಂದೆ ಮಾರರ್ಗೆಟ್ ಆಳ್ವಾ ಅವರು ಟಿಕೆಟ್ ಮಾರಾಟಕ್ಕಿವೆ ಎಂಬ ಹೇಳಿಕೆ ಕುರಿತು ತನಿಖೆ ನಡೆಯುತ್ತಿದೆ. ಆದರಿಂದ ತನಿಖೆ ನಡೆಯುವ ಮುನ್ನ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್ ಮಾರಾಟ ನಡೆಯುತ್ತದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!