ಹೊಸದಿಗಂತ ವರದಿ ಮಂಡ್ಯ :
ಕೆರೆಯಲ್ಲಿ ಈಜಲು ಹೋದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ದೇಶಹಳ್ಳಿ ಸಮೀಪದ ಮದ್ದೂರು ಕೆರೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಮದ್ದೂರು ತಾಲೂಕು ಸೋಮನಹಳ್ಳಿ ಸಮೀಪದ ಶಂಕರಪುರ ಗ್ರಾಮದ ರಂಜಿತ್ (16) ಹಾಗೂ ಮುತ್ತುರಾಜು (15) ಎಂಬುವರೇ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಸೋಮನಹಳ್ಳಿಯಲ್ಲಿ ಐಟಿಐ ತರಗತಿ ರಂಜಿತ್ ವ್ಯಾಸಂಗ ಮಾಡುತ್ತಿದ್ದರೆ, ಮುತ್ತುರಾಜು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ.