ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಘಜ್ನವಿ ಬಣಕ್ಕೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಾದ ಅಬ್ದುಲ್ ಅಜೀಜ್ ಮತ್ತು ಮನ್ವರ್ ಹುಸೇನ್ ಹರಿ ಗ್ರಾಮದವರು. ಇವರಿಬ್ಬರು ಪೂಂಚ್‌ನಲ್ಲಿ ನಡೆದ ಹಲವು ಗ್ರೆನೇಡ್ ದಾಳಿಗಳಲ್ಲಿ ಭಾಗಿಯಾಗಿದ್ದರು.
ಪೊಲೀಸರು 37 ರಾಷ್ಟ್ರೀಯ ರೈಫಲ್ಸ್ ಮತ್ತು 38 ಸೆಂಟ್ರಲ್ ರಿಸರ್ವ್ ಪೊಲೀಸ್ ಬೆಟಾಲಿಯನ್ ಪಡೆಗಳೊಂದಿಗೆ ಭಯೋತ್ಪಾದಕ ಅಜೀಜ್‌ನನ್ನು ಬಂಧಿಸಿದ್ದಾರೆ. ಈ ವೇಳೆ 3 ಗ್ರೆನೇಡ್‌ಗಳನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. ಹುಸೇನ್‌ನಿಂದ ಪಿಸ್ತೂಲ್, ಒಂದು ಮ್ಯಾಗಜೀನ್ ಮತ್ತು ಒಂಬತ್ತು ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯು ಭಯೋತ್ಪಾದಕ ಜಾಲಗಳನ್ನು ಕಿತ್ತುಹಾಕುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.