ಹೊಸದಿಗಂತ ವರದಿ,ಯಲ್ಲಾಪುರ :
ತಾಲೂಕಿನ ಅರಬೈಲ್ ಘಟ್ಟದಲ್ಲಿ ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ಸಿಮೆಂಟ್ ತುಂಬಿದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ಭಾನುವಾರ ನಸುಗತ್ತಲಿನಲ್ಲಿ ನಡೆದಿದೆ.
ಚಾಲಕ ಹಾಗೂ ಕ್ಲಿನರ್ ಗೆ ಗಾಯಗಳಾಗಿದ್ದು, ಯಲ್ಲಾಪುರ ತಾಲೂಕಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದ್ದಾರೆ.
ಲಾರಿ ಗಳ ನಡುವೆ ಅಪಘಾತವಾಗಿದ್ದರಿಂದ ಕೆಲ ಕಾಲ ಸಂಚಾರಅಸ್ತವ್ಯಸ್ತವಾಗಿತ್ತು.ಯಲ್ಲಾಪುರ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.