ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಸಾಕಾನಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 2019ರಲ್ಲಿ ಸಾಕಾನಾಕಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ಆರೋಪಿ ವಿರುದ್ಧ ದೂರನ್ನು ಸಲ್ಲಿಸಿದ್ದರು.
ಅಪ್ರಾಪ್ತ ಬಾಲಕಿ ಅಂಗಡಿಗೆ ಹೋಗಿ ಬರುವಾಗ ಎದುರಾದ ಆರೋಪಿ ಆಕೆಯನ್ನು ಪಕ್ಕದ ಬಿಲ್ಡಿಂಗ್ನ ಎರಡನೇ ಮಹಡಿಗೆ ಕರೆದುಕೊಂಡು ಹೋಗಿ ಆಕೆಯ ಕೈ ಹಿಡಿದು ಐ ಲವ್ ಯೂ ಎಂದು ಹೇಳಿದ್ದಾನೆ.
ಅದಾದ ಬಳಿಕ ಅಪ್ರಾಪ್ತೆ ಅಳುತ್ತಾ ಮನೆಗೆ ಬಂದಿದ್ದಾಳೆ. ಏನಾಯ್ತು ಎಂದು ಪೋಷಕರು ಕೇಳಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಇದೆಲ್ಲವನ್ನೂ ದೂರಿನಲ್ಲಿ ಉಲ್ಲೇಖಿಸಿದ ತಾಯಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ವಿನಂತಿ ಮಾಡಿಕೊಂಡಿದ್ದರು.
ಕೋರ್ಟ್ ವಿಚಾರಣೆಯಲ್ಲಿ ಆರೋಪಿ ತನ್ನನ್ನು ತಾನು ಸಮರ್ಥನೆ ಮಾಡಿಕೊಂಡಿದ್ದಾನೆ. ಇದರಲ್ಲಿ ನಾನು ನಿರಪರಾಧಿ, ಅಸಲಿಗೆ ಆ ಬಾಲಕಿಯೇ ನನ್ನನ್ನು ಭೇಟಿಯಾಗಲು ಕರೆದಿದ್ದು. ನಮ್ಮಿಬ್ಬರ ನಡುವೆ ಸಂಬಂಧವಿತ್ತು. ಆರೋಪಿಯ ಮಾತುಗಳನ್ನು ಆಲಿಸಿದ ನ್ಯಾಯಾಲಯ ಒಂದು ವೇಳೆ ಅಪ್ರಾಪ್ತೆ ನಿನ್ನೊಂದಿಗೆ ಸಂಬಂಧವಿಟ್ಟುಕೊಂಡಿದ್ದರೆ, ನೀನು ನಡೆದುಕೊಂಡ ವಿಷಯವನ್ನು ತಾಯಿ ಹತ್ತಿರ ಹೋಗಿ ಹೆದರಿಕೊಂಡು ಹೇಳುತ್ತಿರಲಿಲ್ಲ ಎಂದು ಹೇಳಿದೆ.
ಅದು ಮಾತ್ರವಲ್ಲದೇ ಆರೋಪಿಯೊಂದಿಗೆ ಸಂಬಂಧ ಇರುವ ವಿಷಯವನ್ನು ಅಪ್ರಾಪ್ತೆಯ ತಾಯಿ ಹಾಗೂ ಅಪ್ರಾಪ್ತೆ ಇಬ್ಬರೂ ಕೂಡ ನಿರಾಕರಿಸಿದ್ದು. ಸಾಕ್ಷಿಯನ್ನು ಪರಿಗಣಿಸಿದ ನ್ಯಾಯಾಲಯ ಅಪರಾಧಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.