Monday, October 20, 2025

ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದ UAE ಸರಕು ವಿಮಾನ: ಇಬ್ಬರು ಸಿಬ್ಬಂದಿ ದುರ್ಮರಣ, ನಾಲ್ವರು ಪೈಲಟ್‌ಗಳು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಮುಂಜಾನೆ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತ ಸಂಭವಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಆಗಮಿಸಿದ್ದ ಒಂದು ಸರಕು ವಿಮಾನವು ಇಳಿಯುವಾಗ ರನ್‌ವೇಯಿಂದ ನಿಯಂತ್ರಣ ಕಳೆದುಕೊಂಡು ಜಾರಿ ಸಮುದ್ರಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ, ವಿಮಾನ ನಿಲ್ದಾಣದ ನೆಲದ ಸಿಬ್ಬಂದಿಯಿದ್ದ ವಾಹನಕ್ಕೆ ವಿಮಾನ ಅಪ್ಪಳಿಸಿದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಬೆಳಗಿನ ಜಾವ ಸುಮಾರು 3:50ಕ್ಕೆ ಈ ಘಟನೆ ನಡೆದಿದೆ. ದುಬೈನಿಂದ ಬಂದ ವಿಮಾನವು ಇಳಿಯುವಾಗ ಉತ್ತರ ರನ್‌ವೇಯಿಂದ ಹೊರಕ್ಕೆ ಜಾರಿದೆ. ಈ ವೇಳೆ, ವಿಮಾನವು ಅಲ್ಲಿದ್ದ ನೆಲದ ಸೇವಾ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಸಮುದ್ರಕ್ಕೆ ಇಳಿದಿದೆ. ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಕೂಡಲೇ ಸುರಕ್ಷಿತವಾಗಿ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ, ವಿಮಾನವು ಜಾರಿದ ರನ್‌ವೇಯನ್ನು ತಕ್ಷಣವೇ ಮುಚ್ಚಲಾಗಿದೆ. ಆದಾಗ್ಯೂ, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಲ್ಲ. ಉಳಿದ ಎರಡು ರನ್‌ವೇಗಳು ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್‌ಗಾಗಿ ತೆರೆದಿರುತ್ತವೆ, ಇದರಿಂದ ಪ್ರಯಾಣಿಕರ ಓಡಾಟಕ್ಕೆ ಹೆಚ್ಚಿನ ಅಡಚಣೆಯಾಗದಂತೆ ನೋಡಿಕೊಳ್ಳಲಾಗಿದೆ. ಈ ದುರಂತಕ್ಕೆ ಕಾರಣಗಳೇನು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ.

error: Content is protected !!