ಬೆಂಗಳೂರಿನಲ್ಲಿ ‘ಊಬರ್ ಗ್ರೀನ್’ ಎಲೆಕ್ಟ್ರಿಕ್ ವಾಹನ ಸೇವೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ʼಊಬರ್‌ ಗ್ರೀನ್‌ʼ ಎಲೆಕ್ಟ್ರಿಕ್‌ ವಾಹನ ಸೇವೆಯನ್ನು ಪ್ರಾರಂಭಿಸಲಾಗಿದೆ.

ನ.30ರಂದು ಅರಮನೆ ಮೈದಾನದಲ್ಲಿ ಬೆಂಗಳೂರು ಟೆಕ್ ಸಮ್ಮಿಟ್​ 2023ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಉಬರ್‌ ಗ್ರೀನ್‌ಗೆ ಚಾಲನೆ ಸಿಕ್ಕಿದೆ.

ಇಂದಿನಿಂದಲೇ ಮಧ್ಯ ಬೆಂಗಳೂರು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಊಬರ್​ ಗ್ರೀನ್ ಸೇವೆ
ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ನಗರದ ಹೆಚ್ಚಿನ ಭಾಗಗಳಿಗೆ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಊಬರ್​ ಗ್ರೀನ್​ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ. ಈ ಸೇವೆಯು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಊಬರ್‌ ಕಂಪನಿ ತಿಳಿಸಿದೆ.

ನಗರದಲ್ಲಿ ಇಂದು ನೀವು ರೈಡ್‌ಗಳನ್ನು ಬುಕ್ ಮಾಡಲು ಊಬರ್‌ ಅಪ್ಲಿಕೇಶನ್‌ ತೆರೆದರೆ ಉಬರ್ ಗ್ರೀನ್ ಆಯ್ಕೆ ಸಿಗುತ್ತದೆ. ಪ್ರಯಾಣಿಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನ ಬಳಸಲು ಊಬರ್‌ ಸಹಾಯ ಮಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!