ಬೆಂಗಳೂರು ಮಳೆಗೆ ಟೈಟಾನಿಕ್‌ ಬೋಟ್‌ ಇಳಿಸಿದ ಊಬರ್‌, ಎಲ್ಲಾದ್ಕಿಂತ ಇದೇ ಫಾಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ ವ್ಯಂಗ್ಯ ಮಾಡಿ, ಟೈಟಾನಿಕ್‌ಬೋಟ್‌ನ್ನು ರಸ್ತೆಗೆ ಇಳಿಸಿದೆ.

ಬೆಂಗಳೂರಿಗೆ ಟೈಟಾನಿಕ್ ಬೋಟ್‌ನ ವ್ಯವಸ್ಥೆಯಿದೆ ಎನ್ನುವ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಹಂಚಿಕೊಂಡಿದೆ. ಈ ರೀತಿಯಾಗಿ ಬೆಂಗಳೂರಿನ ತುಂಬೆಲ್ಲಾ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಊಬರ್ ಕಂಪನಿಯು ಲೇವಡಿ ಮಾಡಿದೆ.

ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಬೆಂಗಳೂರಿನ ಸ್ಥಿತಿಯನ್ನ ಆಡಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

 

View this post on Instagram

 

A post shared by Uber India (@uber_india)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!