ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೆಹಲಿಯಲ್ಲಿ ಸಭೆ ಸೇರಿ I.N.D.I.A ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನಮ್ಮ ಭಾರತ ಮೈತ್ರಿಕೂಟ ರಚನೆಯಾದ ದಿನವೇ ನಾವು ದೇಶದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸಿ ಸಂವಿಧಾನವನ್ನು ಉಳಿಸಬೇಕೆಂದು ನಿರ್ಧರಿಸಿದ್ದೇವೆ. ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ.
ಎಲ್ಲಾ ದೇಶಭಕ್ತರು ಮತ್ತು ಬಿಜೆಪಿಯಿಂದ ಕಿರುಕುಳಕ್ಕೊಳಗಾದ ಎಲ್ಲರೂ ಸಭೆ ಸೇರುತ್ತೇವೆ. ಚಂದ್ರಬಾಬು ನಾಯ್ಡು ಕೂಡ ಬಿಜೆಪಿ ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.