ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಸೋದರ ಮಾವ ಮಾಲೀಕತ್ವದ ಕಂಪನಿಯಿಂದ 6 ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನ ಜಾರಿ ನಿರ್ದೇಶನಾಲಯ (ED) ಮಂಗಳವಾರ ವಶಪಡಿಸಿಕೊಂಡಿದೆ.
ಠಾಕ್ರೆ ಅವರ ಸೋದರ ಮಾವ ಶ್ರೀಧರ್ ಮಾಧವ್ ಪಟಾನ್ಕರ್ ಅವರ 6.45 ಕೋಟಿ ರೂ.ಗಳ ಚರಾಸ್ತಿಯನ್ನ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.ಶ್ರೀಸಾಯಿಬಾಬಾ ಗ್ರಿಹಾನಿರ್ಮಿಟಿ ಪ್ರೈವೇಟ್ ಲಿಮಿಟೆಡ್ (ಪಟಾನ್ಕರ್ ಒಡೆತನದ)ಗೆ ಸೇರಿದ ಮಹಾರಾಷ್ಟ್ರದ ಥಾಣೆಯ ನೀಲಾಂಬರಿ ಯೋಜನೆಯ 11 ವಸತಿ ಫ್ಲ್ಯಾಟ್‌ಗಳನ್ನ ಕೇಂದ್ರ ಏಜೆನ್ಸಿ ಸೀಲ್ ಮಾಡಿದೆ.
ಪುಷ್ಪಕ್ ಬುಲಿಯನ್ ಪ್ರಕರಣದಲ್ಲಿ ರಶ್ಮಿ ಠಾಕ್ರೆ ಸಹೋದರ ಶ್ರೀಧರ್ ಪಾಟಣಕರ್ ಅವರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸಿಎಂ ಠಾಕ್ರೆ ಸಂಬಂಧಿ ವಿರುದ್ಧ ಕಠಿಣ ಕ್ರಮ ಜರುಗಿಸಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶ್ರೀಧರ್ ಪಾಟಣಕರ್ ಅವರಿಗೆ ಸೇರಿದ ವಸತಿ ಫ್ಲಾಟ್ಗಳನ್ನು ಜಪ್ತಿ ಮಾಡಿದೆ.