ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜೊಂದರಲ್ಲಿ ನಡೆದ ವೀಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸ್ವತಃ ಠಾಣೆಯ ಪಿಎಸ್ಐ ಆಗಿರುವ ಸುಷ್ಮಾ ಜಿ.ಬಿ ಅವರು ಆರೋಪಿಗಳಾದ ಶಬನಾಝ್, ಅಲ್ಫಿಯಾ ಮತ್ತು ಅಲೀಮಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಿಳೆಯ ಮಾನ ಮತ್ತು ಗೌರವಕ್ಕೆ ಹಾನಿಯುಂಟಾಗುವ ಪ್ರಕರಣ ಇದಾಗಿರುವುದರಿಂದ ಸತ್ಯಾಸತ್ಯತೆ ಪರಿಶೀಲಿಸಲು ದೂರು ದಾಖಲಿಸುವುದು ಅಗತ್ಯ ಎಂಬ ನೆಲೆಯಲ್ಲಿ, ಪ್ರಕರಣ ನಡೆದ ದಿನದಂದು ನಾನು ಕರ್ತವ್ಯ ನಿರತಳಾಗಿದ್ದರಿಂದ ತನಿಖೆಗಾಗಿ ಈ ದೂರು ದಾಖಲಿಸುತ್ತಿರುವುದಾಗಿ ಸುಷ್ಮಾ ಅವರು ದೂರಿನಲ್ಲಿ ತಿಳಿಸಿದ್ದಾರೆ.